ಪುತ್ತೂರು: ಪುಟ್ಟ ಕಂದಮ್ಮನನ್ನು ಒಂಟಿಯಾಗಿ ಕಾರಿನೊಳಗೆ ಬಿಟ್ಟು ತೆರಳಿದ ಪೋಷಕರು ➤ ಹೊರಬರಲಾರದೆ ಇಕ್ಕಟ್ಟಿನಲ್ಲಿ ಒದ್ದಾಡಿದ ಪುಟ್ಟ ಮಗು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.09. ಬಟ್ಟೆ ಖರೀದಿಗೆಂದು ಆಗಮಿಸಿದ ದಂಪತಿಯ ಎಡವಟ್ಟಿನಿಂದಾಗಿ ಪುಟ್ಟ ಮಗುವೊಂದು ಸುಮಾರು 20 ನಿಮಿಷಗಳ ಕಾಲ ಕಾರಿನೊಳಗೆ ಸಿಲುಕಿಕೊಂಡು ಒದ್ದಾಡಿದ ಘಟನೆ ಗುರುವಾರದಂದು ಪುತ್ತೂರಿನಲ್ಲಿ ನಡೆದಿದೆ.

ಬಟ್ಟೆ ಖರೀದಿಸಲೆಂದು ಬಂದಿದ್ದ ದಂಪತಿ ತಮ್ಮ ಸ್ವಿಪ್ಟ್ ಡಿಸೈರ್ ಕಾರನ್ನು ಪುತ್ತೂರಿನ ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯ ಮುಂಭಾಗದಲ್ಲಿ ನಿಲ್ಲಿಸಿ ಪುಟ್ಟ ಮಗುವನ್ನು ಅದರಲ್ಲೇ ಬಿಟ್ಟು ತೆರಳಿದ್ದಾರೆ. ಕಾರಿನ ಕೀ ಒಳಗಡೆ ಬಾಕಿಯಾಗಿದ್ದು, ಡೋರ್ ಆಟೋ ಲಾಕ್ ಆಗಿದೆ. ಮಗು ಕೀಯನ್ನು ಕೈಯಲ್ಲಿ ಹಿಡಿದುಕೊಂಡು ಆಟವಾಡುತ್ತಿರಬೇಕಾದರೆ ಪೋಷಕರಿಗೆ ಕಾರಿನ ಕೀ ಒಳಗಡೆ ಬಾಕಿಯಾಗಿರುವ ವಿಷಯ ಗಮನಕ್ಕೆ ಬಂದಿದೆ. ತಕ್ಷಣವೇ ಹೊರಬಂದ ಅವರು ಕಾರಿನ ಡೋರನ್ನು ತೆರೆಯಲು ವ್ಯರ್ಥ ಪ್ರಯತ್ನ ಮಾಡಿದ್ದು, ಸ್ಥಳದಲ್ಲಿ ಸ್ಥಳೀಯರು ಜಮಾಯಿಸತೊಡಗಿದ್ದಾರೆ. ಆ ಬಳಿಕ ಮೆಕ್ಯಾನಿಕ್ ಒಬ್ಬರು ಸ್ಥಳಕ್ಕೆ ಆಗಮಿಸಿ ಕಾರಿನ ಹಿಂಬದಿಯ ಸಣ್ಣ ಗಾಜೊಂದನ್ನು ಒಡೆದು ಡೋರ್ ತೆಗೆದು ಮಗುವನ್ನು ರಕ್ಷಿಸಿದ್ದಾರೆ. ಒಟ್ಟಿನಲ್ಲಿ ಪೋಷಕರ ನಿರ್ಲಕ್ಷ್ಯತನದಿಂದಾಗಿ ಮಗು ಅರ್ಧ ತಾಸು ಇಕ್ಕಟ್ಟಿನಲ್ಲಿ ಒದ್ದಾಡಿತು.

Also Read  ಪಲ್ಸ್ ಪೊಲಿಯೋ ಕಾರ್ಯಕ್ರಮ ಜ.31ಕ್ಕೆ ಮುಂದೂಡಿಕೆ ➤ ಆರೋಗ್ಯ ಇಲಾಖೆ ಸ್ಪಷ್ಟನೆ

error: Content is protected !!
Scroll to Top