(ನ್ಯೂಸ್ ಕಡಬ) newskadaba.com ಸವಣೂರು, ಎ.15. ಪಾಲ್ತಾಡಿ 2 ನೇ ವಾರ್ಡ್ ವ್ಯಾಪ್ತಿಯ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾವಣೆ ಮಾಡುವುದೆಂದು ಎ.13 ರಂದು ಸಂಜೆ ನಡೆದ ಮತದಾರರ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಪಾಲ್ತಾಡಿ ಗ್ರಾಮವನ್ನು ವಿರೋಧದ ನಡುವೆಯೂ ಕಡಬ ತಾಲೂಕಿಗೆ ಸೇರ್ಪಡೆ ಮಾಡಿದ್ದರೂ ಮೇಲ್ ಸ್ತರದ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ಮಾಡದಿರುವುದು ಮತ್ತು ಪಾಲ್ತಾಡಿ ಗ್ರಾಮದ ಮಾಡಾವು – ಉಪ್ಪೊಳಿಗೆ – ಪೆರ್ಲಂಪಾಡಿ ರಸ್ತೆಯನ್ನು, ಪಾಲ್ತಾಡಿ – ಬೊಳಿಯಾಲ – ನಳೀಲು ಮತ್ತು ಪಾಲ್ತಾಡಿ – ಪಾರ್ಲ – ಉಪ್ಪೊಳಿಗೆ ಕಾಲನಿ ಪೆರ್ಲಂಪಾಡಿ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಮಾಡದೇ ಇರುವುದರಿಂದ ಇಲ್ಲಿನ ಮತದಾರರು ಮತದಾನ ಬಹಿಷ್ಕಾರ ಅಥವಾ ನೋಟ ಚಲಾವಣೆ ಮಾಡುವ ಕುರಿತು ನಿರ್ಧರಿಸಿದ್ದಾರೆ.
ಸಭೆಯಲ್ಲಿ ಗ್ರಾಮಸ್ಥರಾದ ಶ್ರೀಧರ ಗೌಡ ಅಂಗಡಿಹಿತ್ಲು, ವಿನಯಚಂದ್ರ, ಚೋಮ, ವಿನಯ ರಾಜ್, ಸೋಮನಾಥ, ರಘುನಾಥ್ ರೈ, ನಾಗೇಶ್, ಶ್ರೀನಿವಾಸ, ಜನಾರ್ಧನ, ಶಿವಕುಮಾರ್ ಪಾರ್ಲ, ಜನಾರ್ದನ್, ಗೋಪಾಲಕೃಷ್ಣ, ಸುಶೀಲ, ಸೀತಮ್ಮ, ಪೂರ್ಣಿಮಾ, ಮಧು ಶ್ರೀ, ವಿಮಲಾ, ಅರ್ಚನಾ, ಜಯರಾಮ, ಪಿ.ರಾಮಣ್ಣ ಗೌಡ, ಗಿರಿಧರ , ಕೊರಗಪ್ಪ, ಅಶೋಕ ಗೌಡ, ಪ್ರತೀಕ್ ಕೆ.ಆರ್, ಪ್ರಸಾದ್, ರಾಜೇಶ್ ಪಿ.ಕೆ, ಮೇಘರಾಜ್, ಗಣೇಶ್ ಬಿ.ಜೆ, ಬಾಲಕೃಷ್ಣ ಬಿ.ಎಸ್, ವಿದ್ಯಾಧರ ಪಿ.ಎಸ್, ಎ.ಹಿತಾ, ಪಿ.ಜಗದೀಶ್ ಮೊದಲಾದವರಿದ್ದರು.