ಕೇಂದ್ರ ಬಜೆಟ್: ಕರ್ನಾಟಕಕ್ಕೆ ದೊರೆತ ಹೊಸ ಯೋಜನೆಗಳು ನಿಮಗೆ ಗೊತ್ತೇ?

(ನ್ಯೂಸ್ ಕಡಬ) newskadaba.comನವದೆಹಲಿ,ಫೆ.02. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಸಚಿವ ಪಿಯೂಷ್ ಗೋಯಲ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕಕ್ಕೆ ಬಹಳಷ್ಟು ನಿರೀಕ್ಷೆಗಳಿತ್ತು. ಅಲ್ಲದೇ ಚುನಾವಣೆಯ ಹಿನ್ನೆಲೆಯಲ್ಲಿಯಾದ್ರೂ ಹೊಸ ಯೋಜನೆಗಳು ರಾಜ್ಯಕ್ಕೆ ಘೋಷಣೆ ಆಗಬಹುದು ನಿರೀಕ್ಷೆ ಇತ್ತು.ಹಾಗೇಯೆ ಕರ್ನಾಟಕ್ಕೆ ಕೆಲವೊಂದು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

* ರಾಜ್ಯದ ಎಲ್ಲಾ ನಗರಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ 217.83 ಕೋಟಿ ರೂ.
*ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ.
* ರಾಜ್ಯ ಜಲಾನಯನ ಅಭಿವೃದ್ಧಿಯ ಎರಡನೇ ಯೋಜನೆಗೆ 131.33 ಕೋಟಿ ರೂ.
* ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ ಸಂಸ್ಥೆ ಗೆ 15 ಕೋಟಿ ರೂ.
* ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಗೆ 157.50 ಕೋಟಿ ರೂ.
* ಮೈಸೂರಿನ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆ ಗೆ 54.99 ಕೋಟಿ ರೂ.
* ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಭಿವೃದ್ಧಿಗೆ 178.98 ಕೋಟಿ ರೂ.

Also Read  ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ► ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಬಾಲಕೃಷ್ಣ ಬಳ್ಳೇರಿ

 

 

error: Content is protected !!
Scroll to Top