ಗ್ರಾಹಕರಿಗೆ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡಲು ಅವಕಾಶ ► ಟ್ರಾಯ್‌ನಿಂದ ಮತ್ತೊಂದು ಹೊಸ ನೀತಿ

(ನ್ಯೂಸ್ ಕಡಬ) newskadaba.com ನವದೆಹಲಿ,ಜ.15.ಗ್ರಾಹಕರಿಗೆ ತಾವು ಬೇಕಾದ ಚಾನೆಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡುವ ಹೊಸ ಕೇಬಲ್‌ ಮತ್ತು ಡಿಟಿಎಚ್‌ ನೀತಿಯ ಬಗ್ಗೆ ಟ್ರಾಯ್‌ ಮತ್ತೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ. ಅದರಂತೆ 150 ರು.ಗೆ 100 ಉಚಿತ/ಪೇ ಚಾನೆಲ್‌ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ತಮಗೆ ಬೇಕಾದ ಚಾನೆಲ್‌ಗಳನ್ನು ಗ್ರಾಹಕರು ಜ.31ರೊಳಗೆ ಆಯ್ಕೆ ಮಾಡಿಕೊಂಡರೆ, ಫೆ.1ರಿಂದ ಹೊಸ ನೀತಿ ಅನ್ವಯ ಯಾವುದೇ ತೊಂದರೆ ಇಲ್ಲ, ಟೀವಿ ವಿಕ್ಷಿಸಬಹುದು ಎಂದು ಹೇಳಿದೆ.

 ಗ್ರಾಹಕರು ಡಿಡಿಯ 26 ಚಾನೆಲ್‌  ಉಳಿದ 76 ಪೇ ಚಾನೆಲ್‌ ಆಯ್ಕೆ ಮಾಡಿಕೊಂಡರೆ, ಅದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಉದಾಹರಣೆಗೆ 76 ಪೇ ಚಾನೆಲ್‌ಗೆ 50 ರು. ದರ ಎಂದುಕೊಳ್ಳಿ. ಆಗ ಮೂಲದರ ಮತ್ತು ಜಿಎಸ್‌ಟಿ ಸೇರಿ 150 + 76 ಚಾನೆಲ್‌ನ 50 ರು. ಶುಲ್ಕ ಸೇರಿ 200 ರು. ಪಾವತಿಸಬೇಕು. ಜೊತೆಗೆ 50 ರು.ಗೆ ತಗಲುವ ಜಿಎಸ್‌ಟಿ ಪಾವತಿಸಬೇಕು. ಅಥವಾ 26 ಡಿಡಿ ಚಾನೆಲ್‌, 24 ಉಚಿತ ಚಾನೆಲ್‌ ಪಡೆದು, ಉಳಿದ 50 ಪೇ ಚಾನೆಲ್‌ಗಳನ್ನು ಮೂಲಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.ಒಂದು ವೇಳೆ ಗ್ರಾಹಕರಿಗೆ 100 ಚಾನೆಲ್‌ಗಿಂತ ಹೆಚ್ಚಿನ ಚಾನೆಲ್‌ ಬೇಕಾದಲ್ಲಿ, ನಂತರದ ಪ್ರತಿ 25 ಚಾನೆಲ್‌ನ ಒಂದು ಸ್ತಾ್ಯಬ್‌ಗೆ 25 ರು. ಮತ್ತು ಪೇ ಚಾನೆಲ್‌ನ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಬೇಕು

Also Read  ಕೇರಳದ ಪ್ರವಾಸ ಪ್ರಿಯರ ನೆಚ್ಚಿನ ತಾಣ ಮುನ್ನಾರ್ ನಲ್ಲಿ ಭೂಕುಸಿತ➤ನೂರಕ್ಕೂ ಅಧಿಕ ಮಂದಿ ನಾಪತ್ತೆ ..!!!

ಗ್ರಾಹಕರು ಮೂಲ ಚಾನೆಲ್‌ಗಳ ಪಟ್ಟಿಯಲ್ಲಿ 100 ಚಾನೆಲ್‌ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಡಿಡಿಯ 26 ಚಾನೆಲ್‌ ಕಡ್ಡಾಯ. ಉಳಿದ 74 ಚಾನೆಲ್‌ಗಳ ಪೈಕಿ ಅಷ್ಟೂಉಚಿತ ಚಾನೆಲ್‌ ಆಯ್ದುಕೊಳ್ಳಬಹುದು. ಇದಕ್ಕೆ 130 ರು. ಮೂಲದರ ಮತ್ತು ಜಿಎಸ್‌ಟಿ ಸೇರಿ 150 ರು. ಪಾವತಿಸಿದರೆ ಸಾಕು.

Also Read  ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ..! - ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

 

error: Content is protected !!
Scroll to Top