ಜೆಇಇ ಪರೀಕ್ಷೆಗೆ ಮುಷ್ಕರದ ಭೀತಿ ► ಜನವರಿ 8 ಮತ್ತು 9 ರಂದು ಕಾರ್ಮಿಕ ಸಂಘಟನೆಯಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ

(ನ್ಯೂಸ್ ಕಡಬ) newskadaba.com. (ಎನ್‌ಟಿಎ) ಜ.1.ಈ ವರ್ಷದಿಂದ ಎರಡು ಹಂತದಲ್ಲಿ ಜೆಇಇ ಮೇನ್‌ ಪರೀಕ್ಷೆ ನಡೆಯುತ್ತಿದ್ದು, ಮೊದಲ ಹಂತ ಜನವರಿ 8ರಿಂದ 12ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ಏಪ್ರಿಲ್‌ 8ರಿಂದ 12ರವಗೆ ಪರೀಕ್ಷೆ ಇರಲಿದೆ. ಆದರೆ ಮೊದಲ ಹಂತದ ಜೆಇಇ ಮೇನ್‌ ಪರೀಕ್ಷೆಗೆ ಮುಷ್ಕರದ ಭೀತಿ ಎದುರಾಗಿದೆ. ಜನವರಿ 8 ಮತ್ತು 9ರಂದು ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಮುಷ್ಕರದ ಹಿನ್ನೆಲೆಯಲ್ಲಿ ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆ ವ್ಯತ್ಯಯವಾಗುವ ಸಾಧ್ಯತೆಯಿದ್ದು, ಈಗಲೇ ವಿದ್ಯಾರ್ಥಿಗಳು ಪೂರಕ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ)  ಮಹಾ ನಿರ್ದೇಶಕ ವಿನೀತ್‌ ಜೋಶಿ, ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವ ಕುರಿತಂತೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.

Also Read  ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಸೇವೆಗೆ ಶರತ್ತು ಬದ್ಧ ಅನುಮತಿ ನೀಡಿದ ಸರಕಾರ

 

error: Content is protected !!
Scroll to Top