(ನ್ಯೂಸ್ ಕಡಬ) newskadaba.com ನವದೆಹಲಿ, ಜ.01. ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಗೃಹಬಳಕೆಯ ಅಡುಗೆ ಅನಿಲದ ದರವನ್ನು ಪ್ರತೀ ಸಿಲಿಂಡರ್‌ಗೆ 5.91 ರೂ. ಕಡಿತಗೊಳಿಸಿ ಕೇಂದ್ರ ಸರಕಾರವು ಬಳಕೆದಾರರಿಗೆ ಹೊಸ ವರ್ಷದ ಕೊಡುಗೆ ನೀಡಿದೆ.
ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 120 ರೂ. ಕಡಿತಗೊಳಿಸಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಯಿಂದ ನೂತನ ಬೆಲೆ ಜಾರಿಗೆ ಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ಬೆಲೆಯಲ್ಲಿ ಕುಸಿತ ಹಾಗೂ ಡಾಲರ್ ನೆದುರು ರೂಪಾಯಿ ಮೌಲ್ಯ ಹೆಚ್ಚಿರುವುದು ಎಲ್ ಪಿಜಿ ಬೆಲೆ ಕಡಿತಕ್ಕೆ ಕಾರಣ ಎನ್ನಲಾಗಿದೆ. ನವದೆಹಲಿಯಲ್ಲಿ ಸೋಮವಾರ ಮಧ್ಯರಾತ್ರಿಯಿಂದ 14.2 ಕಿ.ಗ್ರಾಂ. ತೂಕದ ಸಬ್ಸಿಡಿಯುಕ್ತ ಎಲ್ ಪಿಜಿ ಸಿಲಿಂಡರ್ ನ ಬೆಲೆ 494.99 ರೂ. ಆಗಿರುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.