ಕಡಬ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.30. ಗ್ರಾಮ ಪಂಚಾಯತ್ ಗೆಂದು ತೆರಳಿದ ಮಹಿಳೆಯೋರ್ವರು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಗುರುವಾರದಂದು ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಕೊಯಿಲ ಗ್ರಾಮದ ಪಲ್ಲತ್ತಾರು ಕುದ್ಲೂರು ನಿವಾಸಿ ಹರೀಶ್ ಎಂಬವರ ಪತ್ನಿ ಶ್ರೀಮತಿ ಕುಸುಮ ಎಂದು ಗುರುತಿಸಲಾಗಿದೆ. ಇವರು ಗುರುವಾರದಂದು ಗ್ರಾಮ ಪಂಚಾಯತ್ ಗೆಂದು ತೆರಳಿದವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದು, ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ಅವರ ಪತಿ ಹರೀಶ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top