ಕಡಬ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ► ಕ್ಷಣಾರ್ಧದಲ್ಲೇ ಸುಟ್ಟು ಕರಕಲಾದ ಕಾರು

(ನ್ಯೂಸ್ ಕಡಬ) newskadaba.com ಕಡಬ, ನ.28. ಚಲಿಸುತ್ತಿದ್ದ ಮಾರುತಿ ಆಮ್ನಿ ಕಾರೊಂದು ತನ್ನಿಂದ ತಾನೇ ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ ಕುಟ್ರುಪ್ಪಾಡಿ ಗ್ರಾಮದ ತಲೇಕಿ ಬಳಿ ಸಂಭವಿಸಿದೆ.

ಇಲ್ಲಿನ ಬೈದ್ರಿಜಾಲು ನಿವಾಸಿ ಸುಂದರ ಗೌಡ ಎಂಬವರು ಬುಧವಾರ ರಾತ್ರಿ ವೇಳೆಗೆ ಕುಟುಂಬಿಕರೊಂದಿಗೆ ತನ್ನ ಮಾರುತಿ ಓಮ್ನಿ ಕಾರಿನಲ್ಲಿ ಕಡಬಕ್ಕೆ ತೆರಳುತ್ತಿದ್ದ ವೇಳೆ ತಲೇಕಿ ಬಳಿ ತಲುಪಿದಾಗ ಕಾರಿನ ಎಂಜಿನ್ ಬಳಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಎಂಜಿನ್ ಬಳಿ ಸಣ್ಣಗೆ ಬೆಂಕಿ ಹತ್ತಿಕೊಂಡಿರುವುದು ಕಂಡುಬಂದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರನ್ನು ವ್ಯಾಪಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಭಸ್ಮವಾಗಿದ್ದು, ಕಾರಿನಲ್ಲಿದ್ದವರು ಹೊರಗಡೆ ಇಳಿದುದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top