‘ಗಜ’ ಚಂಡಮಾರುತ ಪ್ರಭಾವ ► ತಮಿಳುನಾಡು, ಪುದುಚೇರಿಯಲ್ಲಿ ಹೈ ಅಲರ್ಟ್ ಘೋಷಣೆ ► ರಾಜ್ಯದಲ್ಲೂ ಮಳೆಯಾಗುವ ಸಂಭವ

(ನ್ಯೂಸ್ ಕಡಬ) newskadaba.com ತಮಿಳುನಾಡು, ನ.15. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಗಜ ಚಂಡಮಾರುತವು ಇಂದು ತಮಿಳುನಾಡು ಪ್ರವೇಶಿಸಲಿದ್ದು, ರಾಮೇಶ್ವರಂ ಹಾಗೂ ಕಡಲೂರು ಬಳಿ ಅಪ್ಪಳಿಸುವ ಸಂಭವವಿದೆ.

ಸದ್ಯ ಚೆನ್ನೈನ ಪೂರ್ವದಿಂದ 360 ಕಿ.ಮೀ ಹಾಗೂ ನಾಗಪಟ್ಟಣಂನ ಈಶಾನ್ಯದಿಂದ 390 ಕಿ.ಮೀ. ದೂರದಲ್ಲಿರುವ ಚಂಡಮಾರುತವು ತಮಿಳುನಾಡು ಪ್ರವೇಶಿಸಲಿರುವುದರಿಂದ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹೈ ಅಲರ್ಟ್​​ ಘೋಷಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಲಕ್ಷಣಗಳು ಗೋಚರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಗಜ ಚಂಡಮಾರುತದ ಪ್ರಭಾವ ಕರ್ಬಾಟಕಕ್ಕೂ ತಟ್ಟಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Also Read  ಮಂಗಳೂರು: ವಿವಿಧ ಪ್ರಕರಣಗಳ ಆರೋಪಿ ಕ್ಯಾಲಿಕಟ್ ಏರ್ ಪೋರ್ಟ್ ನಲ್ಲಿ ಅರೆಸ್ಟ್

error: Content is protected !!
Scroll to Top