ನಿಮಗೆ ಬ್ಯಾಂಕಿನಲ್ಲಿ ಸಾಲವಿದ್ದು ಕಂತು ಬಾಕಿಯಾಗಿದೆಯೇ…? ► ಇನ್ನು ಮುಂದೆ ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ಒತ್ತಡ ಹೇರುವಂತಿಲ್ಲ.‌‌‌..

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದ್ದೀರಾ..? ಬ್ಯಾಂಕಿನವರು ಸಾಲವನ್ನು ಮರುಪಾವತಿ ಮಾಡುವಂತೆ ನಿಮಗೆ ಒತ್ತಡ ಹೇರುತ್ತಿದ್ದಾರೆಯೇ…? ಇನ್ಮುಂದೆ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ.

ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ತೀರಿಸಲಾಗದೇ ಒದ್ದಾಡುತ್ತಿರುವವರನ್ನು ದಿವಾಳಿ ಎಂದು ಘೋಷಿಸಲು ವಿಧಿವಿಧಾನವೊಂದನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರವು ಹೊಸ ಕರಡನ್ನು ಸಿದ್ಧಲಡಿಸುತ್ತಿದೆ. ಇದು ಸಾಲಗಾರರು ಬ್ಯಾಂಕುಗಳ ಒತ್ತಡ ತಂತ್ರಗಳಿಗೆ ಸಿಲುಕಿ ನರಳುವುದರ ಬದಲು ತಮ್ಮ ಆರ್ಥಿಕ ಸಂಕಷ್ಟವನ್ನು ಬಗೆಹರಿಸಿ ಕೊಳ್ಳಲು ನೆರವಾಗಲಿದೆ. ಸುಸ್ತಿದಾರರು ವ್ಯವಸ್ಥಿತ ರೀತಿಯಲ್ಲಿ ಸಾಲವನ್ನು ಮರುಪಾವತಿ ಸಲು ನೆರವಾಗಲು ನಿಯಮಗಳನ್ನು ರೂಪಿಸಲಾಗುತ್ತಿದೆ ಮತ್ತು ಏಕಗಂಟಿನಲ್ಲಿ ಮರುಪಾವತಿಸುವಂತೆ ಬ್ಯಾಂಕುಗಳು ಸಾಲಗಾರರ ಮೇಲೆ ಒತ್ತಡ ಹೇರುವಂತಿಲ್ಲ. ಉದ್ಯೋಗ ನಷ್ಟದಂತಹ ಪ್ರಾಮಾಣಿಕ ಕಾರಣಗಳಿಂದ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿರುವ ಮಧ್ಯಮವರ್ಗದ ವೇತನದಾರರು ಮತ್ತು ರೈತರಿಂದ ಹಿಡಿದು ಕಿರಾಣಿ ಅಂಗಡಿಗಳ ಮಾಲಿಕರವರೆಗಿನ ಜನರನ್ನು ಗಮನದಲ್ಲಿಟ್ಟುಕೊಂಡು ಈ ನೂತನ ನಿಯಮ ಗಳನ್ನು ರೂಪಿಸಲಾಗುತ್ತಿದೆ ಮತ್ತು ಇದು ಹೆಚ್ಚು ಮಾನವೀಯ ಉದ್ದೇಶವನ್ನು ಹೊಂದಿದೆ ಎಂದು ಮೂಲಗಳು ತಿಳಿದುಬಂದಿದೆ.

Also Read  200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು

ಸಂಸತ್ತು ಕಳೆದ ವರ್ಷ ಅಂಗೀಕರಿಸಿರುವ ದಿವಾಳಿ ಮತ್ತು ದಿವಾಳಿತನ ಸಂಹಿತೆಯು ವ್ಯಕ್ತಿಗಳನ್ನು ದಿವಾಳಿ ಎಂದು ಘೋಷಿಸಲು ಅವಕಾಶ ಕಲ್ಪಿಸಿದೆ. ಈವರೆಗೆ ಈ ಸಂಹಿತೆಯಡಿ ಕ್ರಮವು ಕಾರ್ಪೊರೇಟ್ ಕ್ಷೇತ್ರ ಮತ್ತು ಸ್ಟಾರ್ಟ್-ಅಪ್‌ಗಳಿಗೆ ಮಾತ್ರ ಸೀಮಿತವಾಗಿದೆ. ವ್ಯಕ್ತಿಗತ ಸಾಲಗಾರರು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ ನೆರವಾಗುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಇನ್‌ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್‌ರಪ್ಟ್ಸಿ ಬೋರ್ಡ್ ಆಫ್ ಇಂಡಿಯಾ ಈಗ ಮಾತುಕತೆಗಳನ್ನು ಆರಂಭಿಸಿವೆ.

error: Content is protected !!
Scroll to Top