ಇನ್ನು ಪಾಸ್‌ಪೋರ್ಟ್ ಪಡೆಯುವುದು ಬಹಳ ಸುಲಭ ► ಇನ್ಮುಂದೆ ಜನನ ಪ್ರಮಾಣ ಪತ್ರ ಅಗತ್ಯವಿಲ್ಲ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.24. ಇನ್ನುಮುಂದೆ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರ ಅಗತ್ಯವಿಲ್ಲ. ಭಾರತೀಯ ಪ್ರಜೆಗಳಿಗೆಗಾಗಿ ಪಾಸ್‌ಪೋರ್ಟ್ ಅನ್ನು ಸರಳಗೊಳಿಸುವ ಪ್ರಕ್ರಿಯೆ ಆರಂಭಿಸಲಾಗದೆ.

ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರಕಾರ, ಜನ್ಮ ದಿನಾಂಕ ದಾಖಲೆಗಾಗಿ ಆಧಾರ್, ಪಾನ್ ಕಾರ್ಡ್‌ಗಳನ್ನು ಬಳಸಬಹುದು ಎಂದು ಹೇಳಿದೆ.

1980ರ ಪಾಸ್‌ಪೋರ್ಟ್ ನಿಯಮದ ಪ್ರಕಾರ, 26.01.1989ರಂದು ಹಾಗೂ ಬಳಿಕ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರು ಕಡ್ಡಾಯವಾಗಿ ಜನನ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ ಇನ್ನು ಮುಂದೆ ಪಾಸ್‌ಪೋರ್ಟ್ ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ/ಅಂತಿಮವಾಗಿ ಕಲಿತ ಶಾಲೆಯಿಂದ ಜನನ ದಾಖಲೆ ಉಳ್ಳ ವರ್ಗಾವಣೆ ಪತ್ರ, ಶಾಲೆ ಪ್ರಮಾಣಪತ್ರ, ಎಸೆಸೆಲ್ಸಿ ಪ್ರಮಾಣ ಪತ್ರ-ಇದರಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಅಥವಾ ಪಾನ್ ಕಾರ್ಡ್, ಆಧಾರ್ ‌ಕಾರ್ಡ್/ಇ-ಆಧಾರ್, ಚಾಲನೆ ಪರವಾನಿಗೆ, ಮತದಾನ ಗುರುತು ಪತ್ರ, ಎಲ್‌ಐಸಿ ಪಾಲಿಸಿ ಬಾಂಡ್‌ಗಳನ್ನು ಸಲ್ಲಿಸಬಹುದು. ಸರಕಾರಿ ಅಧಿಕಾರಿಗಳು ಸೇವಾ ದಾಖಲೆಯ ನಕಲುಪ್ರತಿ, ನಿವೃತ್ತಿ ದಾಖಲೆಗಳನ್ನು ಸಲ್ಲಿಸಬಹುದು.

Also Read  ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು !!!

ಸಾವಿರಾರು ಜನರಿಗೆ ಪಾಸ್‌ಪೋರ್ಟ್ ಸುಲಭವಾಗಿ ದೊರಕಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.

error: Content is protected !!
Scroll to Top