(ನ್ಯೂಸ್ ಕಡಬ) newskadaba.com ಕಡಬ, ಅ.22. ಜಾತಿ ಧರ್ಮ, ಮೇಲು ಕೀಲು ಎನ್ನುವ ಭೇಧಭಾವವಿಲ್ಲದೆ ವಿಶ್ವದ ಎಲ್ಲಾ ಜನರನ್ನು ಬೆಸೆಯುವ ಕೋಟ್ಯಾಂತರ ಭಕ್ತರ ಆರಾಧ್ಯ ಮೂರ್ತಿಯಾಗಿರುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವುದು ಜಿಹಾದಿಗಳ ಷಡ್ಯಂತರ ಒಂದು ಭಾಗವಾಗಿದೆ ಎಂದು ದುರ್ಗಾವಾಹಿನಿಯ ಮಂಗಳೂರು ವಿಭಾಗದ ಸಂಯೋಜಕಿ ವಿದ್ಯಾ ಮಲ್ಯ ಆರೋಪಿಸಿದರು.
ಅವರು ಭಾನುವಾರ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಕಡಬ ತಾಲೂಕು ಅಯ್ಯಪ್ಪ ಭಕ್ತವೃಂದದ ಆಶ್ರಯದಲ್ಲಿ ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ಬೃಹತ್ ಜನಜಾಗೃತಿ ಸಭೆಯಲ್ಲಿ ಪ್ರಮುಖ ಭಾಷಣ ಮಾಡುತ್ತಿದ್ದರು. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎನ್ನುವ ವಾದವನ್ನು ಸುಪ್ರೀಂಕೋರ್ಟ್‍ನಲ್ಲಿ ಮಂಡಿಸಿರುವುದು ಅಯ್ಯಪ್ಪ ಸ್ವಾಮಿಯ ಭಕ್ತರಲ್ಲ, ಹಿಂದೂ ವಿರೋಧಿಗಳು, ಜಿಹಾದಿಗಳನ್ನು ಬೆಂಬಲಿಸುವ ಜನ. ಅದರ ಫಲವೇ ಇಂತಹ ಆದೇಶ ಬರಲು ಸಾಧ್ಯವಾಗಿದೆ. ದೀಪ್ತಿ ದೇಸಾಯಿಯಂತಹ ಹೆಣ್ಣುಮಗಳನ್ನು ಮುಂದಿಟ್ಟುಕೊಂಡು ಶಬರಿಮಲೆಗೆ ಮುನ್ನುಗ್ಗಲು ಸಕಲ ರೀತಿಯ ಪ್ರೋತ್ಸಾಹ ನೀಡುತ್ತಿರುವ ಷಂಡ ಕೇರಳ ಸರಕಾರ ಶಬರಿಮಲೆಗೆ ಅವಕಾಶ ಕಲ್ಪಿಸಲು ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದೆ. ಹಿಂದುಗಳ ಕೊಲೆಯಾಗುತ್ತಿದ್ದು, ಉನ್ನತಮಟ್ಟದ ತನಿಖೆ ನಡೆಸಿ, ಗೋಹತ್ಯೆ ನಿಷೇಧ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದರೆ ಕೇರಳ ಸರಕಾರದ ಕಿವಿಗೆ ಮುಟ್ಟುವುದೇ ಇಲ್ಲ. ಆದರೆ ಶಬರಿಮಲೆ ವಿಚಾರದಲ್ಲಿ ಆದೇಶ ಬಂದಾಗ ಇನ್ನಿಲ್ಲದ ಆಸಕ್ತಿ ವಹಿಸಿ ಕಾನೂನು ಜಾರಿಗೆ ಮುಂದಾಗುತ್ತದೆ. ಮಹಿಳಾ ಪೋಲೀಸರನ್ನು ತಕ್ಷಣ ನೇಮಿಸುತ್ತದೆ. ದೀಪ್ತಿ ದೇಸಾಯಿ, ಸ್ವೀಟಿ ಮೇರಿ, ಕವಿತಾ ಜಕ್ಕಲ್ ಮುಂತಾದವರನ್ನು ಮುಂದಿಟ್ಟುಕೊಂಡು ಹಿಂದೂಗಳ ಭಾವನೆಯ ಮೇಲೆ ಚೆಲ್ಲಾಟವಾಡುತ್ತಿದೆ. 1950 ರಲ್ಲಿ ಸಿಯೋನ್ ಕ್ರಿಶ್ಚಿಯನ್ನರು ಶಬರಿಮಲೆ ಕ್ಷೇತ್ರವನ್ನು ಕ್ರೈಸ್ತ ದೇವಸ್ಥಾನವನ್ನಾಗಿ ಮಾಡಲು ನಡೆಸಿದ ಷಡ್ಯಂತರದ ಭಾಗವಾಗಿ ಕ್ಷೇತ್ರ ಬೆಂಕಿ ಇಟ್ಟಾಗ ಅಂದಿನ ಕೇರಳದ ಮುಖ್ಯ ಮಂತ್ರಿ ಕೇಶವನ್ ಹೇಳುತ್ತಾರೆ, ಹಿಂದೂಗಳ ಶ್ರದ್ಧಾಕೇಂದ್ರಗಳು ಸುಟ್ಟು ಹೋದರೆ ಮೂಢನಂಬಿಕೆಗಳು ನಾಶವಾಗುತ್ತದೆ. ಆದ್ದರಿಂದ ಅದರ ಬಗ್ಗೆ ತಲೆ ಕೆಡಿಸುವ ಅಗತ್ಯವಿಲ್ಲ ಎಂದು, ಆಗ ಇದೇ ಪಿಣರಾಯಿ ವಿಜಯನ್ ಕೇಶವನ್ ಹೇಳಿಕೆಯ ವಿರುದ್ಧ ದೊಡ್ಡಮಟ್ಟದ ಆಂದೋಲನ ಮಾಡಿ ಶಬರಿಮಲೆ ಹೇಸರೇಳಿ ಅಧಿಕಾರ ಗಿಟ್ಟಿಸಿಕೊಂಡರು. ಇದೀಗ ಅವರೇ ಶಬರಿಮಲೆ ಕ್ಷೇತ್ರದ ವಿರುದ್ಧ ತಮ್ಮ ನಡೆಯನ್ನು ಪ್ರದರ್ಶಿಸುತ್ತಾರೆ. ಕೇರಳ ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇದರ ವಿರುದ್ಧ ಕೇರಳದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಮಹಿಳೆಯರು ಅಕ್ರೋಶಗೊಂಡಿದ್ದಾರೆ, ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಆದರೆ ನಮ್ಮ ಧರ್ಮ ಆಚರಣೆಗೆ ಧಕ್ಕೆ ಬಂದಾಗ ನಾವು ಸುಮ್ಮನಿರುವುದಿಲ್ಲ, ತಕ್ಷಣ ಕೇರಳ ಸರಕಾರ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್ ಗೌರವಾಧ್ಯಕ್ಷ ಜನಾರ್ಧನ ರಾವ್ ಪ್ರಸ್ತಾವನೆಗೈದು ಕೇರಳ ಸರಕಾರ ಹಿಂದೂ ದಮನ ನೀತಿಯನ್ನು ತಮ್ಮ ಏಕಮೇವ ಅಜೆಂಡಾವನ್ನಾಗಿಸಿಕೊಂಡಿದೆ. ಅಲ್ಲಿನ ಪೊಲೀಸರನ್ನು ತಮ್ಮ ಪಕ್ಷದ ಗೂಂಡಾ ಕಾರ್ಯಕರ್ತರನ್ನಾಗಿಸಿಕೊಂಡು ಹಿಂದೂಗಳ ಮೇಲೆ ದಬ್ಬಾಳಿಕೆ ಹಾಗೂ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರೆಂಜಲಾಡಿ ಗೋಳಿಯಡ್ಕ ಧರ್ಮಶಿಖರ ಅಯ್ಯಪ್ಪ ಮಂದಿರದ ಗುರುಸ್ವಾಮಿ ರವಿಂದ್ರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಮನೋಹರ ರೈ ಬೆದ್ರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಕುಮಾರ್ ಕಡಬ ವಂದಿಸಿದರು. ದಯಾನಂದ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕಡಬ ಶ್ರೀಕಂಠ ಮಹಾಗಣಪತಿ ಸ್ವಾಮಿ ದೇವಸ್ಥಾನದಲ್ಲಿ ಜಮಾಯಿಸಿದ ಅಯ್ಯಪ್ಪ ಭಕ್ತರು, ಬೃಹತ್ ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳೊಂದಿಗೆ ಆಗಮಿಸಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಮೂರು ಬಿಟ್ಟ ಮೂವರಿಂದ ದೇವಳ ಪ್ರವೇಶಕ್ಕೆ ಯತ್ನ: ಪ್ರಮುಖ ಭಾಷಣ ಮಾಡುತ್ತಿದ್ದ ವಿದ್ಯಾ ಮಲ್ಯ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಮಾಡಲು ಯತ್ನಿಸಿದ ಪ್ರಮುಖ ಮೂರು ಮಹಿಳೆಯರಾದ ಫಾತಿಮಾ ಸುಲೈಮಾನ್, ಸ್ವೀಟಿ ಮೇರಿ, ಕವಿತ ಜಕ್ಕಲ್ ಅವರು ಮೂರೂ ಬಿಟ್ಟವರು ಎಂದು ಛೇಡಿಸಿದರು. ತನ್ನ ಧರ್ಮದಲ್ಲಿ ಮಹಿಳೆಯರನ್ನು ನಿಕೃಷ್ಟವಾಗಿ ನಡೆದುಕೊಳ್ಳುತ್ತಿದ್ದರೂ ಅದರ ವಿರುದ್ಧ ಹೋರಾಟವನ್ನು ತೀವೃಗೊಳಿಸದ ಫಾತಿಮಾ ಸುಲೈಮಾನ್ ಅಯ್ಯಪ್ಪ ದೇವರ ವಿಚಾರದಲ್ಲಿ ಅನಗತ್ಯ ವಿವಾದ ಉಂಟು ಮಾಡುತ್ತಿದ್ದಾರೆ. ಇವರು ಅಯ್ಯಪ್ಪ ದೇವರ ದರ್ಶನ ಪಡೆಯಲು ಕಪ್ಪು ವಸ್ತ್ರಧರಿಸಕೊಂಡು ಅರೆ ನಗ್ನ ಸ್ಥಿತಿಯಲ್ಲಿ ಬರುತ್ತಾರೆ. ಇರುಮುಡಿಯ ಕಟ್ಟಿನಲ್ಲಿ ಸ್ಯಾನಿಟರಿ ನ್ಯಾಫ್ಕಿನ್ ಇಟ್ಟುಕೊಂಡು ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಡುತ್ತಾಳೆ, ಆಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಯ್ಯಪ್ಪ ಸ್ವಾಮಿ ಸಲಿಂಗ ಕಾಮಕ್ಕೆ ಹುಟ್ಟಿದವನು ಎಂದು ಅವಹೇಳನ ಮಾಡುತ್ತಾಳೆ. ಇನ್ನಿಬ್ಬರು ಕ್ರೈಸ್ತ ಮಹಿಳೆಯರು ಇವರೆಲ್ಲರೂ ಹಿಂದೂ ಧರ್ಮದ ಮೇಲೆ ಸವಾರಿ ಮಾಡಲು ಹೊರಟಿರುವ ಕೆಟ್ಟ ಮಹಿಳೆಯರು ಎನ್ನುವುದು ಅವರ ಇತಿಹಾಸವನ್ನು ನೋಡಿದರೆ ಗೊತ್ತಾಗುತ್ತದೆ. ತಾಕತ್ತಿದ್ದರೆ ರೆಹನಾ ಫಾತಿಮಾ ಮಸೀದಿಗಳಿಗೆ ಬುರ್ಕಾ ಧರಿಸಿಕೊಂಡು ಹೋಗಲಿ ಎಂದು ಸವಾಲು ಹಾಕಿದರು.