ರಾಷ್ಟ್ರಾದ್ಯಂತ ಸದ್ದು ಮಾಡಿದ #MeToo ಅಭಿಯಾನಕ್ಕೆ ಮೊದಲ ತಲೆದಂಡ ► ಕೇಂದ್ರ ಸಚಿವ ಎಂ.ಜೆ.ಅಕ್ಬರ್ ರಾಜೀನಾಮೆ..?

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಅ.14. ಲೈಂಗಿಕ ಕಿರುಕುಳದ ವಿರುದ್ಧ ರಾಷ್ಟ್ರಾದ್ಯಂತ ಆರಂಭವಾಗಿರುವ ‘ಮೀ ಟೂ’ ಅಭಿಯಾನಕ್ಕೆ ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಎಂ.ಜೆ. ಅಕ್ಬರ್ ತಲೆದಂಡವಾಗಿದ್ದು, ಅವರು ಭಾನುವಾರದಂದು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ.

ಎಂ.ಜೆ. ಅಕ್ಬರ್ ತಾನು ಈ ಹಿಂದೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರೆಂದು ಹಲವು ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ‘ಮೀ ಟೂ’ ಅಭಿಯಾನದ ಮೂಲಕ ಹಲವು ಮಹಿಳಾ ಸಹೋದ್ಯೋಗಿಗಳು ಆರೋಪ ಹೊರಿಸಿದ್ದರು. ಸಚಿವರ ವಿರುದ್ಧ ಆರೋಪ ಪ್ರಬಲವಾಗಿ ಕೇಳಿಬಂದ ಕಾರಣ ವಿದೇಶ ಪ್ರವಾಸ ಮುಗಿಸಿ ರವಿವಾರ ಭಾರತಕ್ಕೆ ವಾಪಸಾದ ಅಕ್ಬರ್ ಇಂದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸರಕಾರ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.

Also Read  ವಿದ್ಯುತ್ ಸ್ಪರ್ಶಗೊಂಡು ತಾಯಿ-ಮಗ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top