ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.24. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋದ ಮಾಜಿ ಮುಖ್ಯಸ್ಥ ಪದ್ಮವಿಭೂಷಣ ಉಡುಪಿ ರಾಮಚಂದ್ರ ರಾವ್​ (85) ಸೋಮವಾರದಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದರು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಜಾನೆ 2.30ರ ಸುಮಾರಿಗೆ ಕೊನೆಯುಸಿರೆಳಿದಿದ್ದಾರೆ.

ಭೌತಿಕ ಸಂಶೋಧನಾ ಪ್ರಯೋಗಾಲಯ ಆಡಳಿತ ಮಂಡಳಿ ಹಾಗೂ ತಿರುವನಂತಪುರದ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿದ್ದ ಅವರು ನಿವೃತ್ತರಾದ ಬಳಿಕವೂ ಹಲವು ಮಹತ್ವದ ಯೋಜನೆಗಳ ಭಾಗವಾಗಿದ್ದರು.

ಲಕ್ಷ್ಮೀನಾರಾಯಣ ರಾವ್ ಹಾಗೂ ಕೃಷ್ಣವೇಣೀಯಮ್ಮ ದಂಪತಿಗಳ ಪುತ್ರನಾಗಿ 1932 ಮಾರ್ಚ್ 10, ರಂದು ಉಡುಪಿ ಸಮೀಪದ ‘ಮಾರ್ಪಳ್ಳಿ’ಯಲ್ಲಿ ಜನಿಸಿದರು. ಅವರು ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮಸಾಚುಸೆಟ್ಸ್ ನಲ್ಲಿ ಉನ್ನತ ವ್ಯಾಸಂಗ ಮಾಡಿದರು.

Also Read  ಚಂದ್ರಯಾನ-3ರ 24 ಗಂಟೆಗಳ ರಿಹರ್ಸಲ್ ಪೂರ್ಣ- ಉಡಾವಣೆಗೆ ಕೌಂಟ್ ಡೌನ್ ಶುರು

ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು, 1966ರಲ್ಲಿ ಭಾರತಕ್ಕೆ ಮರಳಿದ್ದರು.ಭಾರತದ ಎರಡನೇ ಅತಿ ಶ್ರೇಷ್ಠ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ, 2017 ‘ಡಾ.ಯು.ಆರ್.ರಾವ್ ಅವರ ಅಂತರಿಕ್ಷ ತಂತ್ರಜ್ಞಾನ ಕೃತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ’ ಲಭಿಸಿದೆ. 1976ರಲ್ಲಿ ಇವರಿಗೆ ಭಾರತ ಸರಕಾರವು ‘ಪದ್ಮಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು.’ಭಟ್ನಾಗರ ಪ್ರಶಸ್ತಿ’, ‘ರವೀಂದ್ರ ಪುರಸ್ಕಾರ’, ‘ನಾಸಾ ಪುರಸ್ಕಾರ’, ‘ಗಗಾರಿನ್ ಪದಕ’ ಮೊದಲಾದ ಗೌರವ ದೊರಕಿವೆ., ಮೈಸೂರು ವಿಶ್ವವಿದ್ಯಾನಿಲಯ ಸೇರಿ ಅನೇಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಲಭಿಸಿದ್ದು ಯು.ಆರ್.ರಾವ್ ಇವರು ಶಾಂತಿಗಾಗಿ ಅಂತರಿಕ್ಷ ಯೋಜನೆಯ ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು.

error: Content is protected !!
Scroll to Top