ಸಾವು ಹೇಗೆಲ್ಲಾ ಬರುತ್ತದೆಯೆಂದು ಊಹಿಸಲೂ ಸಾಧ್ಯವಿಲ್ಲ…. ► ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಮೇಲೆ ತೆಂಗಿನ ಮರ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಮುಂಬೈ, ಜು.23. ಸಾವು ಹೇಗೆಲ್ಲಾ ಬರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಅದಕ್ಕೆ ನಿದರ್ಶನವೆಂಬಂತೆ ಬೆಳಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದಾಗ ತೆಂಗಿನ ಮರವೊಂದು ಮೈಮೇಲೆ ಉರುಳಿ ಬಿದ್ದ ಪರಿಣಾಮವಾಗಿ ದೂರದರ್ಶನದ ಮಾಜಿ ವಾರ್ತಾ ನಿರೂಪಕಿಯೊಬ್ಬರು ಮೃತಪಟ್ಟ ಘಟನೆ ಮುಂಬೈನ ಚೆಂಬೂರ್‌ನಲ್ಲಿ ನಡೆದಿದೆ.

ದೂರದರ್ಶನದ ಮಾಜಿ ವಾರ್ತಾ ನಿರೂಪಕಿ ಮತ್ತು ಯೋಗ ಶಿಕ್ಷಕಿ ಕಾಂಚನ್ ನಾಥ್(58) ಎಂಬವರೇ ತೆಂಗಿನ ಮರ ಬಿದ್ದು ಮೃತಪಟ್ಟ ದುರ್ದೈವಿ. ಗುರುವಾರ ಬೆಳಗ್ಗೆ ಕಾಂಚನ್ ನಾಥ್ ಯೋಗ ತರಗತಿ ಮುಗಿಸಿ ಮನೆಗೆ ಸಂತ ವೆಂಕಯ್ಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೆಂಗಿನ ಮರ ಬುಡದಿಂದ ತುಂಡಾಗಿ ಬಿದ್ದ ಪರಿಣಾಮವಾಗಿ ಅದರಡಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಕಾಂಚನ್ ನಾಥ್ ಮೇಲೆ ತೆಂಗಿನ ಮರ ಬಿದ್ದಿರುವುದನ್ನು ನೋಡಿದ ದಾರಿಹೋಕರು ಅವರನ್ನು ಪಕ್ಕದ ಸುಶ್ರುತ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರ ಗಾಯಗೊಂಡಿದ್ದ ಕಾಂಚನ್ ನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಕಾಂಚನ್ ನಾಥ್ ಮೇಲೆ ತೆಂಗಿನ ಮರ ಬಿದ್ದ ಘಟನೆ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿಗಳ ಕ್ಯಾಮರಾದಲ್ಲಿ ಸೆರೆಯಾಗಿವೆ.

error: Content is protected !!
Scroll to Top