(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.23. ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿರುವ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಸುಮಾರು ಹತ್ತು ಕೋಟಿ ಕುಟುಂಬದ 50 ಕೋಟಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ರವಿವಾರ ದೇಶಾದ್ಯಂತ ಜಾರಿಗೆ ತರುತ್ತಿದೆ.
ಯೋಜನೆಗೆ ಪ್ರಧಾನಿ ಮೋದಿ ಝಾರ್ಖಂಡ್‌ನ ರಾಂಚಿಯಲ್ಲಿ ಭಾನುವಾರದಂದು ಚಾಲನೆ ನೀಡಲಿದ್ದು, ಈ ಯೋಜನೆಯನ್ನು ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನ ಎನ್ನಲಾಗಿದೆ. ಈ ಯೋಜನೆಯಡಿ ಪ್ರತೀ ಕುಟುಂಬವು ವಾರ್ಷಿಕ 2 ಸಾವಿರ ರೂ. ಕಂತು ಪಾವತಿಸಿದ್ದಲ್ಲಿ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಕರ್ನಾಟಕ ಸಹಿತ 26 ರಾಜ್ಯಗಳ 444 ಜಿಲ್ಲೆಗಳಲ್ಲಿ ಈ ಯೋಜನೆಯು ಜಾರಿಗೆ ಬರಲಿದ್ದು, ಇದರಲ್ಲಿ ಕೇಂದ್ರ ಸರಕಾರವು ಶೇ.60 ಮತ್ತು ರಾಜ್ಯ ಸರಕಾರ ಶೇ.40 ಮೊತ್ತವನ್ನು ಭರಿಸಲಿವೆ.