ಚೆನ್ನಾವರ : ಎಸ್.ಎಮ್.ಎ ಅಧ್ಯಕ್ಷ ಅರಿಯಡ್ಕ  ಅಬ್ದುಲ್ ರಹಿಮಾನ್ ಹಾಜಿಗೆ ಸಮ್ಮಾನ

ಸವಣೂರು : ಸುನ್ನೀ ಮೆನೇಜ್ಮೆಂಟ್ ಅಸೋಸಿಯೇಶನ್ (ಎಸ್ ಎಮ್ ಎ) ವಿಟ್ಲ ವಲಯ ಅಧ್ಯಕ್ಷರಾಗಿ ಆಯ್ಕೆಗೊಂಡ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರನ್ನು ಎಸ್ ಎಮ್ ಎ ಬೈತಡ್ಕ ರಿಜಿನಲ್ ವತಿಯಿಂದ ಪಾಲ್ತಾಡಿ ಗ್ರಾಮದ ಚೆನ್ನಾವರ ಸಿರಾಜುಲ್ ಉಲೂಮ್ ಮದರಸ ಹಾಲ್ ನಲ್ಲಿ  ಸಮ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಮ್ ಎ ಬೈತಡ್ಕ ರಿಜಿನಲ್ ಅಧ್ಯಕ್ಷ ಅಬ್ದುರ್ರಹ್ಮಾನ್ ನೆಲ್ಲಿಕಟ್ಟೆ ವಹಿಸಿದ್ದರು.ಅಬ್ದುಲ್ಲಾ ಅಹ್ಸನಿ ಮಾಡನ್ನೂರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ  ಚೆನ್ನಾವರ ಮುಹಿಯ್ಯುದ್ದಿನ್ ಜುಮಾ ಮಸೀದಿಯ ಜಮಾತ್ ಕಮಿಟಿ ಅಧ್ಯಕ್ಷ ಕರೀಮ್ ಹಾಜಿ, ಅಬ್ದುಲ್ಲತೀಫ್ ಮುಸ್ಲಿಯಾರ್ ಕೂರತ್,  ಯೂಸುಫ್ ಮುಸ್ಲಿಯಾರ್ ದಾರುಲ್ ಹಿಕ್ಮ, ಉಮ್ಮರ್ ನೆಕ್ಕಿಲ, ಹನೀಫ್ ಹಾಜಿ ಇಂದ್ರಾಜೆ, ಸುಲೈಮಾನ್ ಸಅದಿ, ಶಂಸುದ್ದೀನ್ ಝಂಝಂ, ಮುಹಮ್ಮದ್ ಹಾಜಿ ಬಿಸ್ಮಿಲ್ಲಾ, ಮಾಮು ಹಾಜಿ ಚೆನ್ನಾರ್, ಅಬ್ದುರ್ರಹ್ಮಾನ್ ಚೆನ್ನಾರ್, ಅಬೂಬಕರ್ ಸಅದಿ ತಂಬಿನಮಕ್ಕಿ, ಅಬ್ಬಾಸ್ ಮುಸ್ಲಿಯಾರ್ ಬೆಳಂದೂರು ಮೊದಲಾದವರು ಉಪಸ್ಥಿತರಿದ್ದರು.

Scroll to Top