(ನ್ಯೂಸ್ ಕಡಬ) newskadaba.com ಕಾಣಿಯೂರು, ಸೆ.16. ಅಡಿಕೆಗೆ ಬಾಧಿಸಿದ ಕೊಳೆರೋಗದ ಪರಿಣಾಮ ವ್ಯಾಪಕವಾಗಿ ಅಡಿಕೆ ನಾಶವಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅಡಿಕೆ ಕೊಳೆರೋಗ ಕೇಂದ್ರ ಸಮೀಕ್ಷಾ ತಂಡವು ಕಾಣಿಯೂರಿಗೆ ಗುರುವಾರ ಭೇಟಿ ನೀಡಿ ಸಮೀಕ್ಷೆ ನಡೆಸಿತು.
ಕಾಣಿಯೂರು ಗ್ರಾಮದ ಪುಣ್ಚತ್ತಾರು ವೆಂಕಮ್ಮರವರ ತೋಟಕ್ಕೆ ಆಗಮಿಸಿದ ಸಮೀಕ್ಷಾ ತಂಡವು ಅಡಿಕೆಗೆ ಕೊಳೆ ರೋಗ ಬಾಧಿಸಿರುವ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಕಾಣಿಯೂರು ಗ್ರಾಪಂ ಅಧ್ಯಕ್ಷೆ ಸೀತಮ್ಮ ಖಂಡಿಗ, ತಾಪಂ ಸದಸ್ಯೆ ಲಲಿತಾ ಈಶ್ವರ, ಕಾಣಿಯೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕ ಈರಯ್ಯ ಡಿ.ಎನ್., ತೋಟಗಾರಿಕೆ ಇಲಾಖೆಯ ರೇಖಾ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಶಿವಾನಂದ ಪುಣ್ಚತ್ತಾರು, ಪ್ರದೀಪ್ ಬೊಬ್ಬೆಕೇರಿ ಹಾಗೂ ಕಡಬ ನಾಡಕಚೇರಿ ಸಿಬ್ಬಂದಿಗಳು, ಗ್ರಾಮಕರಣಿಕರು, ಗ್ರಾಮ ಸಹಾಯಕರು ಹಾಜರಿದ್ದರು.