ಕೊಲೆ ಪ್ರಕರಣದ ಆರೋಪಿ ಕೇರಳದ ಜೈಲಿನಿಂದ ಸುಳ್ಯ ನ್ಯಾಯಾಲಯಕ್ಕೆ ಹಾಜರಿ ► ಹಿಂತಿರುಗುವಾಗ ಸುಳ್ಯ ಬಸ್ ನಿಲ್ದಾಣದಲ್ಲಿ ಕೇರಳ ಪೊಲೀಸರನ್ನು ತಳ್ಳಿ ಪರಾರಿ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.14. ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸುಳ್ಯ ನಿವಾಸಿಯನ್ನು ಹಳೆಯ ಕಳವು ಪ್ರಕರಣಕ್ಕೆ ಸಂಬಂದಿಸಿ ನ್ಯಾಯಲಯಕ್ಕೆ ಹಾಜರುಪಡಿಸಲೆಂದು ಸುಳ್ಯಕ್ಕೆ ಕರೆತಂದು ಹಿಂದಿರುಗುವ ಪೊಲೀಸರನ್ನು ದೂಡಿ ಪರಾರಿಯಾದ ಘಟನೆ ಶುಕ್ರವಾರದಂದು ಸುಳ್ಯದಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಅಜ್ಜಾವರ ಬೊಳಂಬ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಝೀಝ್(35) ಇತ್ತೀಚೆಗೆ ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೇರಳದ ಹೊಸದುರ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಶುಕ್ರವಾರದಂದು ಸುಳ್ಯ ಪೊಲೀಸ್ ಠಾಣೆಯ ಹಳೆಯ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಜೆಎಮ್ಎಫ್ ಸಿ ನ್ಯಾಯಲಯಕ್ಕೆ ಕೇರಳದ ಇಬ್ಬರು ಪೊಲೀಸರು ಹೊಸದುರ್ಗ ಜೈಲಿನಿಂದ ಕರೆತಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಕೇರಳದ ಹೊಸದುರ್ಗ ಜೈಲಿಗೆ ಕರೆದುಕೊಂಡು ಹೋಗಲು ಸುಳ್ಯ ಬಸ್ ನಿಲ್ದಾಣಕ್ಕೆ ಬಂದು ಬಸ್ ನಲ್ಲಿ ಕುಳಿತಿದ್ದಾಗ ಆರೋಪಿಯು ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿದಾಗ ಒಬ್ಬ ಕೇರಳ ಪೊಲೀಸ್ ಆತನನ್ನು ಜೊತೆಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದು, ಆ ಸಂದರ್ಭದಲ್ಲಿ ಆರೋಪಿಯು ಪೊಲೀಸ್ ಸಿಬ್ಬಂದಿಯನ್ನು ದೂಡಿ ಬಸ್ ನಿಲ್ದಾಣದ ಕಾಂಪೌಂಡ್ ಏರಿ ಪರಾರಿಯಾಗಿದ್ದಾನೆ. ಆರೋಪಿ ಅಝೀಝ್ ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Also Read  ಕೋವಿಡ್ ನಿಂದ ನೀಟ್ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ‌ ಗುಡ್ ನ್ಯೂಸ್.?!

error: Content is protected !!
Scroll to Top