ಜಿಯೋದಿಂದ 1500 ರೂಪಾಯಿಗೆ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ► 153 ರೂ.ಗೆ ಅನ್‍ಲಿಮಿಟೆಡ್ ಡಾಟಾ

(ನ್ಯೂಸ್ ಕಡಬ) newskadaba.com ಮುಂಬೈ, ಜು.21.  ಉಚಿತವಾಗಿ ಡೇಟಾ ಆಫರ್ ನೀಡಿ ಟೆಲಿಕಾಂ ವಲಯವನ್ನೇ ಅಲ್ಲೋಲಕಲ್ಲೋಲ ಮಾಡಿದ್ದ ರಿಲಾಯನ್ಸ್ ಜಿಯೋ ಇದೀಗ ಅತೀ ಕಡಿಮೆ ಬೆಲೆಯ ಕೇವಲ 1500 ರೂ. ಮುಖಬೆಲೆಯ 4ಜಿ ಫೀಚರ್ ಫೋನನ್ನು ಬಿಡುಗಡೆಗೊಳಿಸಿದೆ.

ವೈಶಿಷ್ಟ್ಯಗಳು:
ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಲಾಗಿರುವ ಈ ಫೋನನ್ನು ಮೂರು ವರ್ಷದ ಬಳಿಕ ಹಿಂತಿರುಗಿಸಿದರೆ ಫೋನ್‍ಗೆ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಈ ಫೋನಿನ ಬೀಟಾ ಟೆಸ್ಟಿಂಗ್ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಆಗಸ್ಟ್ 24ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಫೋನ್ ಗ್ರಾಹಕರ ಕೈಗೆ ಸಿಗಲಿದೆ. ಈ ಫೋನಿನಲ್ಲಿ ಜಿಯೋ ಸಿನಿಮಾ, ಮ್ಯೂಸಿಕ್ ಸೇರಿದಂತೆ ಜಿಯೋ ಆಪ್ಲಿಕೇಶನ್ ಪ್ರಿ ಲೋಡೆಡ್ ಆಗಿ ಇರಲಿದೆ.

2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ 240X320 ಪಿಕ್ಸೆಲ್, ಆಲ್ಫಾ ನ್ಯುಮರಿಕ್ ಕೀಪ್ಯಾಡ್, ಎಫ್.ಎಂ. ರೇಡಿಯೋ, ಟಾರ್ಚ್ ಲೈಟ್, ಹೆಡ್ ಫೋನ್ ಜ್ಯಾಕ್, ಎಸ್‍ಡಿ ಕಾರ್ಡ್ ಸ್ಲಾಟ್, ಫೋನ್ ಕಾಂಟಾಕ್ಟ್, ಕಾಲ್ ಹಿಸ್ಟರಿ ಮೊದಲಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಫೀಚರ್ ಫೋನ್ ಖರೀದಿಸಿದ ಗ್ರಾಹಕರಿಗೆ ತಿಂಗಳಿಗೆ 153 ರೂ. ರಿಚಾರ್ಚ್ ಆಫರ್ ಅನ್ನು ಜಿಯೋ ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ ಆನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೇ ಎಂದಿನಂತೆ ಹೊರ ಹೋಗುವ ಕರೆಗಳು ಮತ್ತು ಮೆಸೇಜ್ ಗಳು ಉಚಿತವಾಗಿ ಸಿಗಲಿದೆ.

error: Content is protected !!
Scroll to Top