ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ ► ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 86.25 ರೂ.

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.02. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಗರಿಷ್ಠ ಮಟ್ಟಕ್ಕೆ ತಲುಪಿದೆ.

ಮುಂಬಯಿಯಲ್ಲಿ ಭಾನುವಾರದಂದು ಪೆಟ್ರೋಲ್ ಲೀಟರಿಗೆ 86.25 ರೂ. ಗಳಿಗೆ ತಲುಪಿದ್ದು, ಡೀಸೆಲ್‌ ಲೀಟರಿಗೆ 74.76 ರೂ. ಗಳಾಗಿವೆ. ಕಳೆದ ತಿಂಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಸ್ವಲ್ಪ ಮಟ್ಟಿನ ದರ ಇಳಿಕೆ ಮಾಡಿತ್ತಾದರೂ, ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ಬೆಂಗಳೂರಿನಲ್ಲೂ ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರಿದ್ದು , ಒಂದು ಲೀಟರ್​ ಪೆಟ್ರೋಲ್​ 81 ರೂ. ಹಾಗೂ ಡೀಸೆಲ್​​ 73 ರೂ. ಏರಿಕೆಯಾಗುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

Also Read  ಪ್ರೀತಿಸಿದ ಹುಡುಗಿಯ ಮೇಲೆ ಕುದಿಯುವ ಎಣ್ಣೆ ಸುರಿದ ಯುವಕ..! 

error: Content is protected !!
Scroll to Top