ಹಾಡುಹಗಲೇ ಮನೆಗೆ ನುಗ್ಗಿ ತಾಯಿ – ಮಗುವನ್ನು ಅಪಹರಿಸಿದ ದುಷ್ಕರ್ಮಿಗಳು ► ಬೊಬ್ಬೆ ಕೇಳಿ ಸ್ಥಳಕ್ಕೆ ಧಾವಿಸಿದ ಚಿತ್ತಾರಿಕಲ್‌ ನಿವಾಸಿಗಳು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ.31. ತಾಯಿ ಮತ್ತು ಮಗುವೊಂದನ್ನು ದುಷ್ಕರ್ಮಿಗಳ‌ ತಂಡವೊಂದು ಹಾಡುಹಗಲೇ ಮನೆಯಿಂದ ಅಪಹರಿಸಿರುವ ಘಟನೆ ಕಾಸರಗೋಡಿನಲ್ಲಿ ಶುಕ್ರವಾರದಂದು ನಡೆದಿದೆ.

ಕಾಸರಗೋಡಿನ ಚಿತ್ತಾರಿಕ್ಕಲ್ ನಿವಾಸಿ ಮನೋಜ್ ಎಂಬವರ ಪತ್ನಿ ಮಿನು(23) ಹಾಗೂ ಮಗು ಸಾಯಿಕೃಷ್ಣ(3) ಅಪಹರಣಕ್ಕೊಳಗಾದವರು. ಮೆಕ್ಯಾನಿಕ್ ವೃತ್ತಿಯಲ್ಲಿರುವ ಮನೋಜ್ ಮನೆಯಿಂದ ಕೆಲಸಕ್ಕೆಂದು ತೆರಳಿದ ಬಳಿಕ ಕಾರಿನಲ್ಲಿ ದುಷ್ಕರ್ಮಿಗಳ ತಂಡವು ಮನೆಗೆ ಬಂದಿದೆ. ಈ ಬಗ್ಗೆ ಮಿನು ತನ್ನ ಪತಿ ಮನೋಜ್ ರಿಗೆ ಕರೆ ಮಾಡಿ ತಿಳಿಸಿದ್ದು, ಆ ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ತಾಯಿ, ಮಗುವಿನ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದರಾದರೂ ಅದಾಗಲೇ ತಂಡವು ಕಾರಿನಲ್ಲಿ ಇಬ್ಬರನ್ನು ಅಪಹರಿಸಿ ಪರಾರಿಯಾಗಿದೆ.

Also Read  ಜಲಾವೃತಗೊಂಡಿದ್ದ ಸೇತುವೆಯಲ್ಲಿ ಕಾರು ಸಿಲುಕಿ ಇಬ್ಬರು ಮೃತ್ಯು..!

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ. ಶ್ರೀನಿವಾಸ್, ಕಾಞಂಗಾಡ್ ಡಿವೈಎಸ್ಪಿ ಪಿ.ಕೆ. ಸುಧಾಕರನ್, ಚಿತ್ತಾರಿಕ್ಕಲ್ ಠಾಣಾ ಸಬ್ ಇನ್ಸ್‌ಪೆಕ್ಟರ್ ರಂಜಿತ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top