(ನ್ಯೂಸ್ ಕಡಬ) newskadaba.com ಕಡಬ, ಆ.21. ಕೊಡಗು ಹಾಗೂ ಕೇರಳ ರಾಜ್ಯದಲ್ಲಿನ ಮಳೆಹಾನಿ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್(ರಿ.) ವತಿಯಿಂದ ಸಂಗ್ರಹಿಸಲಾದ ನಗದು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಂಪಾಜೆಯ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಜೇಸಿ ಸದಸ್ಯರು ಹಾಗೂ ದಾನಿಗಳಿಂದ ಸಂಗ್ರಹಿಸಿದ 50 ಸಾವಿರದ 1 ರೂ. ನಗದನ್ನು ಪರಿಹಾರ ನಿಧಿಗೆ ನೀಡುವುದರೊಂದಿಗೆ ಆಹಾರ ಹಾಗೂ ದಿನ ಬಳಕೆಯ ವಸ್ತುಗಳಾದ 25 ಚೀಲ ಅಕ್ಕಿ, ಸುಮಾರು 350 ಪ್ಯಾಕೆಟ್ ಬಿಸ್ಕೆಟ್, 150 ಟೂತ್ ಪೇಸ್ಟ್ ಹಾಗೂ ಬ್ರಶ್, ರಸ್ಕ್ ಹಾಗೂ ಬ್ರೆಡ್ ಪ್ಯಾಕೆಟ್‍ಗಳು, ಚಾಕಲೇಟ್, ಸ್ಯಾನಿಟರಿ ಪ್ಯಾಡ್ ಮುಂತಾದ ವಸ್ತುಗಳನ್ನು ಪರಿಹಾರ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಕಡಬದ ಯಶೋದಾ ಸೂಪರ್‍ಶಾಪ್‍ನ ಮಾಲಕ ದಯಾನಂದ ಪ್ರಭು ಅವರು 220 ಪ್ಯಾಕೆಟ್ ಬಿಸ್ಕೆಟ್‍ಗಳನ್ನು ಜೇಸಿ ಮೂಲಕ ಪರಿಹಾರ ಕೇಂದ್ರಕ್ಕೆ ನೀಡಿದರು. ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ್ ಎನ್.ಕೆ., ಜೇಸಿಐ ಕಡಬ ಕದಂಬ ಘಟಕದ ಅಧ್ಯಕ್ಷ ವೆಂಕಟೇಶ್ ಪಾಡ್ಲ, ಜೇಸಿ ಪದಾಧಿಕಾರಿಗಳಾದ ಜಯರಾಮ ಗೌಡ ಅರ್ತಿಲ, ಫಯಾಝ್ ಕೆನರಾ, ಗಣೇಶ್ ಕೈಕುರೆ, ಶಿವಪ್ರಸಾದ್ ರೈ ಮೈಲೇರಿ, ಅಶೋಕ್ ಕುಮಾರ್ ಪಿ., ಕೆ.ಎಸ್.ದಿನೇಶ್ ಆಚಾರ್, ಮಂಜುನಾಥ ಮರ್ಧಾಳ, ಮೋಹನ ಕೋಡಿಂಬಾಳ, ಕಾಶಿನಾಥ್ ಗೋಗಟೆ, ದಿವಾಕರ ಮುಂಡಾಲ, ಸಾಮಾಜಿಕ ಮುಂದಾಳು ಶಿವಪ್ರಸಾದ್ ಕೈಕುರೆ ಮೊದಲಾದವರು ಉಪಸ್ಥಿತರಿದ್ದರು.