ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಗುಡ್ಡ, ಕಲ್ಲು ಬಂಡೆ ಕುಸಿತ ► ಮಂಗಳೂರು – ಬೆಂಗಳೂರು ರೈಲು ಸಂಚಾರ ಮತ್ತಷ್ಟು ವಿಳಂಬ ಸಾಧ್ಯತೆ

(ನ್ಯೂಸ್ ಕಡಬ) newskadaba.com ಹಾಸನ, ಆ.19. ಪ್ರಕೃತಿ ವಿಕೋಪದಿಂದಾಗಿ ಸಕಲೇಶಪುರ – ಸುಬ್ರಹ್ಮಣ್ಯ ನಡುವಿನ ರೈಲ್ವೇ ಹಳಿಯ ಮೇಲೆ ವಿವಿಧ ಕಡೆ ಗುಡ್ಡ ಮತ್ತು ಭಾರೀ ಗಾತ್ರದ ಕಲ್ಲು ಬಂಡೆ ಕುಸಿದಿರುವ ಕಾರಣ ಬೆಂಗಳೂರು – ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಸಕಲೇಶಪುರ ತಾಲೂಕಿನ ಎಡಕುಮೇರಿ ಪರಿಸರದ ಸುಮಾರು ಐವತ್ತಕ್ಕೂ ಹೆಚ್ಚಿನ ಕಡೆ ಗುಡ್ಡ ಕುಸಿದು, ನೂರಾರು ಎಕರೆ ಕಾಫಿ ತೋಟ ನಾಶವಾಗಿದ್ದರೆ, ಅನೇಕ ಗ್ರಾಮಗಳ ಸಂಪರ್ಕ ರಸ್ತೆ ಬಂದ್ ಆಗಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಸಿಬ್ಬಂದಿ ಕೊರತೆ ಮಣ್ಣು, ಬಂಡೆಗಳ ತೆರವು ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಮಳೆ ಕಡಿಮೆಯಾದಲ್ಲಿ ಮಾತ್ರ ಮಣ್ಣು ತೆರವು ಕಾರ್ಯದ ಜೊತೆಗೆ ಹಾನಿಯಾಗಿರುವ ಹಳಿ ದುರಸ್ತಿ ಕೆಲಸ ಮುಗಿದು ರೈಲು ಓಡಾಟ ಶುರುವಾಗಲಿದೆ. ಇಲ್ಲವಾದರೆ ಈ ಮಾರ್ಗದಲ್ಲಿ ರೈಲು ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆಯೆಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group