ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವಿಧಿವಶ ► ಐದು ಬಾರಿ ತಮಿಳುನಾಡಿನ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದ ‘ಕಲೈನಾರ್

(ನ್ಯೂಸ್ ಕಡಬ) newskadaba.com ಚೆನ್ನೈ, ಆ.07. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮಂಗಳವಾರದಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಮಿಳುನಾಡಿನಲ್ಲಿ ‘ಕಲೈನಾರ್’ಎಂದೇ ಖ್ಯಾತರಾಗಿದ್ದ ಕರುಣಾನಿಧಿ ಡಿಎಂಕೆ ಪಕ್ಷದ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದರು ಐದು ಬಾರಿ ಮುಖ್ಯ ಮಂತ್ರಿಯಾಗಿ, ಮೂರು ಬಾರಿ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ್ದರು. ಕಳೆದ ಜುಲೈ 29 ರಿಂದ ಕಾವೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದ ಕರುಣಾನಿಧಿಯವರಿಗೆ 94 ವರ್ಷ ವಯಸ್ಸಾಗಿತ್ತು. ಮಂಗಳವಾರದಂದು ಕರುಣಾನಿಧಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದರಿಂದ ಚಿಕಿತ್ಸೆಗೆ‌ ಸ್ಪಂದಿಸದೆ ಕರುಣಾನಿಧಿಯವರು ಕೊನೆಯುಸಿರೆಳೆದರು.

Also Read  ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು

error: Content is protected !!
Scroll to Top