ಬಿಳಿನೆಲೆ CPCRI ಯನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳಿಸಲು ತೆರೆಮರೆಯ ಯತ್ನ ► ಸ್ಥಳಾಂತರಗೊಳಿಸದಂತೆ ಕೇಂದ್ರ ಪರಿಸರ ಖಾತೆ ಸಚಿವರಿಗೆ ಸಚಿವ ಡಿವಿಯವರಿಂದ ಒತ್ತಾಯ

(ನ್ಯೂಸ್ ಕಡಬ) newskadaba.com ಕಡಬ, ಆ.01. ಕಡಬ ತಾಲೂಕಿನ ನೆಟ್ಟಣದಲ್ಲಿರುವ ಕಿದು ತೆಂಗು ಸಂಶೋಧನಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಗೊಳಿಸದಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಹರ್ಷವರ್ಧನ್ ಅವರಿಗೆ ಕೇಂದ್ರ ಅಂಕಿಅಂಶ ಹಾಗೂ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಮಂಗಳವಾರ ಮನವರಿಕೆ ಮಾಡಿದ್ದು, ಸಿಪಿಸಿಆರ್‍ಐ ಉಳಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ.

ಸಚಿವ ಸದಾನಂದ ಗೌಡ ಅವರು ನವದೆಹಲಿಯ ತಮ್ಮ ನಿವಾಸಕ್ಕೆ ಕೇಂದ್ರ ಅರಣ್ಯ ಸಚಿವರು, ದ.ಕ ಸಂಸದರು ಹಾಗೂ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಅರಣ್ಯ ಸಚಿವರಲ್ಲಿ ವಿಷಯ ಪ್ರಸ್ತಾಪಿಸಿದ ಡಿ.ವಿಯವರು ಕಿದು ಸಿ.ಪಿಸಿ.ಆರ್‍ಐ ಸಂಸ್ಥೆ 1972 ರಲ್ಲಿ ಸ್ಥಾಪನೆಯಾಗಿದ್ದು, ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಲೀಸ್ ಒಪ್ಪಂದ ಮಾಡಿಕೊಂಡಿದೆ, ಇದರ ಅವಧಿಯು 2000 ನೇ ಇಸವಿಗೆ ಮುಗಿದಿರುತ್ತದೆ, ಈ ಹಿನ್ನೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಈ ವರೆಗಿನ 19.26 ಕೋಟಿ ರೂ ಲೀಸ್ ಮೊತ್ತವನ್ನು ಪಾವತಿಸಲು ಸಿಪಿಸಿಆರ್‍ಐನ ಕೇಂದ್ರ ಸಂಸ್ಥೆ ಐಸಿಆರ್‍ಡಿ ಸಂಸ್ಥೆಗೆ ಸೂಚನೆ ನೀಡಿದೆ. ಇದನ್ನು ಪಾವತಿಸದ ಹಿನ್ನೆಯಲ್ಲಿ ಸಿಪಿಸಿಆರ್‍ಐ ಸಂಸ್ಥೆಯನ್ನು ಆಂದ್ರ ಪ್ರದೇಶಕ್ಕೆ ಸ್ಥಳಾಂತರಿಸುವ ಮಾತು ಕೇಳಿಬರುತ್ತಿದೆ, ಆದರೆ ಕಾಂಚನ ಛೋಪ್ರಾ ಸಮಿತಿಯು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ವರದಿಯಂತೆ ಒಂದು ವೇಳೆ ಲೀಸ್ ಮೊತ್ತವನ್ನು ಪಾವತಿಸಲು ವಿನಾಯಿತಿ ಬಯಸಿದಲ್ಲಿ ಸಂಸ್ಥೆಯು ಪರಿಸರಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂತೆಯೇ ಕಿದು ಸಿಪಿಸಿಆರ್‍ಐ ಸಂಶೋಧನಾ ಸಂಸ್ಥೆಯು ಪರಿಸರ ಮತ್ತು ಅರಣ್ಯ ಇಲಾಖೆಯು ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಲು ಬದ್ದವಾಗಿದೆ ಎಂದು ಡಿವಿಯವರು ಕೇಂದ್ರ ಅರಣ್ಯ ಸಚಿವರಿಗೆ ಮನವರಿಕೆ ಮಾಡಿ ಕಿದು ಸಿಪಿಸಿಆರ್‍ಐ ಸಂಸ್ಥೆಯನ್ನು ದ.ಕ ಜಿಲ್ಲೆಯ ನೆಟ್ಟಣದಲ್ಲೇ ಉಳಿಯಬೇಕು ಎಂದರು. ಮಾತ್ರವಲ್ಲ ಸಿಪಿಸಿ ಆರ್‍ಐ ಪಾವತಿಸಬೇಕಾದ ಲೀಸ್ ಮೊತ್ತಕ್ಕೆ ವಿನಾಯಿತಿ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಅರಣ್ಯ ಸಚಿವರು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದ.ಕ ಸಂಸದ ನಳಿನ್ ಕುಮಾರ್ ಕಟೀಲ್, ಸಿಪಿಸಿಆರ್‍ಐ ನಿರ್ದೆಶಕ ಚೌಡಪ್ಪ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಸಿಪಿಸಿಆರ್‍ಐಯನ್ನು ಅವಲಂಬಿಸಿಕೊಂಡು ಅನೇಕ ರೈತಾಪಿ ವರ್ಗ ಪ್ರಯೋಜನ ಪಡೆಯುತ್ತಾರೆ, ಒಂದು ಒಳ್ಳೆಯ ತೆಂಗು ಸಂಶೋಧನಾ ಕೇಂದ್ರ ಕರ್ನಾಟದಲ್ಲಿ ಅದೂ ದ,ಕ ಜಿಲ್ಲೆಯ ನೆಟ್ಟಣದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

Also Read  ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಸಿಪಿಸಿಆರ್‍ಯನ್ನು ಯಾವುದೇ ಕಾರಣಕ್ಕೂ ಆಂದ್ರಕ್ಕೆ ಸ್ಥಳಾಂತರ ಮಾಡಲು ಅವಕಾಶ ನೀಡಬಾರದು ಎಂದು ಇತ್ತೀಚೆಗೆ ಪುತ್ತೂರಿನಲ್ಲಿ ಸಚಿವ ಡಿವಿ.ಸದಾನಂದ ಗೌಡ ಅವರನ್ನು ಅವರ ನಿವಾಸದಲ್ಲಿ ಸಿಪಿಸಿಆರ್ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಬಾಲಕೃಷ್ಣ ಗೌಡ ವಾಲಾûಜೆ ಅವರ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವರು ನಮಗೆ ಸಿಪಿಸಿಆರ್‍ಐ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಸಚಿವರು, ಸಂಸದರು, ಹಾಗೂ ಅಧಿಕಾರಿಗಳನ್ನು ಕರೆಸಿ ಮಾತುಕತೆ ಮಡುವ ಭರವಸೆ ನೀಡಿದ್ದರು. ಇದೀಗ ಅರಣ್ಯ ಸಚಿವರಿಗೆ ಮನವರಿಕೆ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಆರಂಭಿಕ ಹಂತದ ಜಯಸಿಕ್ಕಿದೆ ಎಂದಿದ್ದಾರೆ.

Also Read  ? ಕಾಸ್ ಗಂಜ್ ಘಟನೆಯ ಪ್ರಮುಖ ಆರೋಪಿ ಮೋತಿ ಸಿಂಗ್ ಎನ್ ಕೌಂಟರ್ ಬಲಿ

error: Content is protected !!
Scroll to Top