ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ ► ಕೆಂಪಗಿನ ರಕ್ತ ಚಂದಿರನ ವಿಶೇಷತೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಇಂದು ರಾತ್ರಿ ಗೋಚರವಾಗಲಿದೆ.

ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಚಂದ್ರ ಕೆಂಪಾಗಿ ಗೋಚರಿಸಲಿದ್ದಾನೆ. ರಾತ್ರಿ 11.44ಕ್ಕೆ ಚಂದ್ರ ಗ್ರಹಣ ಆರಂಭಗೊಳ್ಳಲಿದ್ದು, ಪೂರ್ಣ ಚಂದ್ರ ಗ್ರಹಣ ರಾತ್ರಿಯ 1 ಗಂಟೆಗೆ ಗೋಚರಿಸುವ ಸಾಧ್ಯತೆ ಇದೆ. ಮುಂಜಾನೆ 4.58ರ ತನಕ ಗ್ರಹಣ ಮುಂದುವರೆಯಲಿದೆ. ಒಟ್ಟು ಒಂದು ಗಂಟೆ 43 ನಿಮಿಷಗಳ ಕಾಲ ಭೂಮಿಯ ನೆರಳನ್ನು ಚಂದ್ರನ ಮೇಲೆ ನೋಡಬಹುದಾಗಿದೆ. ಇದು ಪೂರ್ಣ ಚಂದ್ರಗ್ರಹಣವಾದರೆ ಭಾಗಶಃ ಚಂದ್ರಗ್ರಹಣ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲವಿರಲಿದೆ. ಈ ಸಂದರ್ಭ ರಕ್ತ ಚಂದಿರ ಅಥವಾ ಬ್ಲಡ್ ಮೂನ್ ಕೂಡ ನೋಡಬಹುದಾಗಿದೆ. ಆಗ ಚಂದ್ರ ಕೆಂಪಗಿನ ಬಣ್ಣದಲ್ಲಿ ಕಾಣಿಸುತ್ತದೆ. ಇದೇ ವರ್ಷದ ಜನವರಿ 31 ರಂದು ಆಕಾಶದಲ್ಲಿ ಚಮಾತ್ಕಾರವೊಂದು ನಡೆದಿತ್ತು. ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಸಿಕೊಂಡಿದ್ದರು. ಇದೀಗ ಎರಡನೇ ಚಂದ್ರಗ್ರಹಣ ಎದುರಾಗಿದೆ.

error: Content is protected !!

Join the Group

Join WhatsApp Group