ಉಪ್ಪಳ: ಲಾರಿ – ತೂಫಾನ್ ಮುಖಾಮುಖಿ ಢಿಕ್ಕಿ ► ಮಂಗಳೂರಿನ ಒಂದೇ ಕುಟುಂಬದ ಐವರ ದುರ್ಮರಣ



(ನ್ಯೂಸ್ ಕಡಬ) newskadaba.com ಮಂಗಳೂರು, ಜು.09. ಲಾರಿ ಹಾಗೂ ತೂಫಾನ್ ನಡುವೆ ಢಿಕ್ಕಿ ಸಂಭವಿಸಿ ಐವರು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ನಯಾ ಬಜಾರ್‍‍ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.





ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೆ.ಸಿ.ರೋಡ್ ಅಜ್ಜಿನಡ್ಕ ನಿವಾಸಿಗಳಾದ ಬೀಫಾತಿಮ್ಮ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್(35) ಎಂದು ಗುರುತಿಸಲಾಗಿದೆ. ಇವರು ಕುಟುಂಬ ಸಮೇತರಾಗಿ ಕೇರಳದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಹಿಂತಿರುಗುತ್ತಿದ್ದಾಗ ಉಪ್ಪಳ ಸಮೀಪ ಲಾರಿ ಹಾಗೂ ತೂಫಾನ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ನಡೆದಿದೆ. ತಕ್ಷಣವೇ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಂಭೀರ ಗಾಯಗೊಂಡಿದ್ದ ಏಳು ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.






error: Content is protected !!
Scroll to Top