
(ನ್ಯೂಸ್ ಕಡಬ) newskadaba.com, ನ .24 . ಮಂಗಳೂರು . ಮುಲ್ಕಿ ತಾಲೂಕಿನ ಬೆಳ್ತಂಗಡಿ-ಮೂಡಬಿದ್ರೆ-ಮುಲ್ಕಿ ರಾಜ್ಯ ಹೆದ್ದಾರಿ 70 ರ ಕಿಮೀ 58.78 ರಿಂದ 59-.58 ರವರೆಗೆ (ಕಾರ್ನಾಡ್ ಜಂಕ್ಷನ್ ನಿಂದ ಮುಲ್ಕಿ ನಾರಾಯಣಗುರು ಸಂಕೀರ್ಣದ ವರೆಗೆ) ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯು ನಡೆಯುವ ಸಂದರ್ಭದಲ್ಲಿ ನವೆಂಬರ್ 24 ರಿಂದ ಮಾರ್ಚ್ 23 ರವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಹಾಗೂ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.
ಕಾರ್ನಾಡು ಜಂಕ್ಷನ್ನಿಂದ ಮುಲ್ಕಿ/ಮಂಗಳೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಾರ್ನಾಡು ಜಂಕ್ಷನ್ನಿಂದ ಕಾರ್ನಾಡು ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ-66ನ್ನು ಸಂಪರ್ಕಿಸಿ ಮುಲ್ಕಿ/ ಮಂಗಳೂರು ಕಡೆಗೆ ಸಂಚರಿಸಬೇಕು.
ಮಂಗಳೂರು ಕಡೆಯಿಂದ ಕಾರ್ನಾಡು/ ಕಿನ್ನಿಗೋಳಿ ಕಡೆಗೆ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿಯ ಕಾರ್ನಾಡು ಬೈಪಾಸ್ ಬಳಿ ಬಲಕ್ಕೆ ತಿರುಗಿ ಕಾರ್ನಾಡು/ ಕಿನ್ನಿಗೋಳಿ ಕಡೆಗೆ ಸಂಚರಿಸಬೇಕು. ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ರಾಷ್ಟ್ರೀಯ ಹೆದ್ದಾರಿ -66ರ ಕಾರ್ನಾಡ್ ಬೈಪಾಸ್ ಮೂಲಕ ಕಾರ್ನಾಡ್ ಜಂಕ್ಷನ್ನ್ನು ಸಂಪರ್ಕಿಸಿ ಕಿನ್ನಿಗೋಳಿ ಕಡೆಗೆ ಸಂಚರಿಸಬೇಕು.




