
(ನ್ಯೂಸ್ ಕಡಬ) newskadaba.com, ನ .24 . ಮಂಗಳೂರು . ಸರ್ಕಾರದ ಆದೇಶದಂತೆ ಹೊಳೆನರಸೀಪುರ ವಿಶೇಷ ಲೋಕೋಪಯೋಗಿ ಉಪವಿಭಾಗ, ಹೊಳೆನರಸೀಪುರ ಕಛೇರಿಯನ್ನು ಹುದ್ದೆ ಸಮೇತ ಉಳ್ಳಾಲ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸಿ ಲೋಕೋಪಯೋಗಿ ಉಪವಿಭಾಗ, ಉಳ್ಳಾಲ ಕಚೇರಿ ಎಂದು ಮರು ನಾಮಕರಣ ಮಾಡಿ ನೂತನ ಕಚೇರಿಯನ್ನು ಸೃಜಿಸಿ ಆದೇಶಿಸಲಾಗಿರುತ್ತದೆ.
ಈ ಕಾರ್ಯಾಲಯದ ಕಟ್ಟಡವನ್ನು ತಾತ್ಕಾಲಿಕವಾಗಿ ಹಾಲಿ ಇರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ ಮಂಗಳೂರು ಉಪವಿಭಾಗ ಆವರಣದಲ್ಲಿ ಖಾಲಿ ಇರುವ ಕಟ್ಟಡದಲ್ಲಿ ಅಕ್ಟೋಬರ್ 29 ರಿಂದ ಪ್ರಾರಂಭಿಸಲಾಗಿರುತ್ತದೆ. ಈ ಕಾರ್ಯಾಲಯಕ್ಕೆ ಸಂಬಂಧಿಸಿದ ಸರ್ಕಾರಿ, ಅರೆ ಸರ್ಕಾರಿ ಮತ್ತು ರಹಸ್ಯ ಪತ್ರಗಳು ಹಾಗೂ ಇತರೆ ಪತ್ರಗಳನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರ ಕಛೇರಿ, ಲೋಕೋಪಯೋಗಿ ಇಲಾಖೆ, ಉಳ್ಳಾಲ ಉಪವಿಭಾಗ, ಹಳೇ ಬಂದರು ರಸ್ತೆ, ಮಂಗಳೂರು- 575001 (ಇ ಮೇಲ್: aeepwdullal@gmail.com) ವಿಳಾಸಕ್ಕೆ ಕಳುಹಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




