ಕದನ ವಿರಾಮ ಉಲ್ಲಂಘಿಸಿದ ಪಾಕ್ ► ನಾಲ್ವರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಜಮ್ಮು-ಕಾಶ್ಮೀರ, ಜೂ.14. ಗಡಿಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕ್‌ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಸಾಂಬಾ ಜಿಲ್ಲೆಯ ಅಂತರ್ರಾಷ್ಟ್ರೀಯ ಗಡಿಯಲ್ಲಿ ಬುಧವಾರದಂದು ಪಾಕ್‌ ಸೈನಿಕರು ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದು, ಗಡಿ ಭದ್ರತಾ ಪಡೆಯ ಯೋಧರು ಗುಂಡಿನ ಮೂಲಕ ಪಾಕ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್‌ನ ಸಹಾಯಕ ಕಮಾಂಡೆಂಟ್‌ ಜತೀಂದರ್ ಸಿಂಗ್, ಸಬ್‌‌ ಇನ್ಸ್‌ಪೆಕ್ಟರ್‌ ರಜನೀಶ್, ಎಎಸ್ಐ ರಾಮ್ ನಿವಾಸ್ ಹಾಗೂ ಹನ್ಸ್ ರಾಜ್ ಸೇರಿದಂತೆ ನಾಲ್ವರು ವೀರ ಮರಣವನ್ನಪ್ಪಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಎನ್. ಜಂತಾಲ್ ಗಂಭೀರ ಗಾಯಗೊಂಡಿದ್ದು, ಸತ್ವಾರಿ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಹೆತ್ತ ತಾಯಿಯನ್ನೇ ಟೆರೇಸಿನಿಂದ ತಳ್ಳಿಹಾಕಿ ಕೊಂದ ವಿದ್ಯಾವಂತ ಮಗ ► ಆರೋಪಿ ಸಹಾಯಕ ಪ್ರೊಫೆಸರ್ ಬಂಧನ

error: Content is protected !!
Scroll to Top