ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾರು ಅಪಘಾತ ► ಅಪಾಯದಿಂದ ಪಾರಾದ ಅಪ್ಪು

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಜೂ.08. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಪರಿಣಾಮ ಅಪ್ಪು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಗುರುವಾರ ರಾತ್ರಿ ಆಂಧ್ರ ಪ್ರದೇಶದ ಅನಂತಪುರದಲ್ಲಿ ಸಂಭವಿಸಿದೆ.

ಬಳ್ಳಾರಿಯಲ್ಲಿ ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ತುಮಕೂರು ಮಾರ್ಗದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅನಂತಪುರ ಸಮೀಪ ಮೂರು ರಸ್ತೆ ಸೇರುವಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಪುನೀತ್ ರಾಜ್‍ಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ತನ್ನ ಸ್ನೇಹಿತನ ಕಾರಿನಲ್ಲಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ.

Also Read  ಬಾರಾಮುಲ್ಲಾದಲ್ಲೂ ಎನ್‌ಕೌಂಟರ್ ➤ ಓರ್ವ ಭಯೋತ್ಪಾದಕ ಹತ್ಯೆ

error: Content is protected !!
Scroll to Top