ಕಡಬ ಸೈಂಟ್ ಜೋಕಿಮ್ಸ್ ಕಾಲೇಜು : ಇ.ಎಲ್‌.ಸಿ ಮಾಹಿತಿ ಸಭೆ

(ನ್ಯೂಸ್‌ ಕಡಬ) newskadaba.com, ಸೆ. 23 . ಕಡಬ :ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಮತದಾರರ ಸಾಕ್ಷರತಾ ಸಂಘದ ವತಿಯಿಂದ ಯುವ ಮತದಾರರ ನೋಂದಣಿ ಕುರಿತು ಮಾಹಿತಿ ಸಭೆಯು ಜರುಗಿತು. ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಯುವ ಮತದಾರರ ಆನ್ ಲೈನ್ ನೋಂದಣಿ ಕುರಿತು ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ಕಾಲೇಜು ಪ್ರಾಚಾರ್ಯರಾದ ಕಿರಣ್ ಕುಮಾರ್ ಮತದಾರರ ನೋಂದಣಿ ಪ್ರಕ್ರಿಯೆಯ ಮಹತ್ವವನ್ನು ತಿಳಿಸಿದರು.

ಸಭೆಯಲ್ಲಿ  ಉಪನ್ಯಾಸಕ ವೃಂದದವರು, ಇ ಎಲ್ ಸಿ ಪ್ರತಿನಿಧಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.ಕಾಲೇಜು ಇ ಎಲ್‌ ಸಿ ಪ್ರತಿನಿಧಿ ಉಪನ್ಯಾಸಕರಾದ ರಾಜೇಶ್ ಎನ್ ಅಗತ್ಯ ಮಾಹಿತಿಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು..

Scroll to Top