
(ನ್ಯೂಸ್ ಕಡಬ) newskadaba.com, ಸೆ. 23 . ಆಲಂಕಾರು:- ಶಿಕ್ಷಣ ಇಲಾಖೆ ಯ 14ರ ವಯೋಮಾನದ ಬಾಲಕಿಯರ ದ.ಕ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟವು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆಯಿತು.ಇದರಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ 5 ಕಬ್ಬಡಿ ಪಟುಗಳನ್ನು ಒಳಗೊಂಡ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು,ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ತಂಡಲ್ಲಿದ್ದ ಕು.ದಿಶಾ ಕೋಡಂದೂರು (ಚಾರ್ವಕ ಗ್ರಾಮದ ದಿ.ದಾಮೋದರ ಗೌಡ ಮತ್ತು ಶ್ರೀಮತಿ ದೇವಿಕಾ ದಂಪತಿ ಪುತ್ರಿ ) ಉತ್ತಮ ಹಿಡಿತಗಾರ್ತಿ,ಕು.ಜ್ಞಾನವಿ ಮಾಪಲ (ಕುಂತೂರು ಮಾಪಲದ ಶ್ರೀಮತಿ ಮತ್ತು ಶ್ರೀ ಪುಷ್ಪ ಆನಂದ ಗೌಡರ ಪುತ್ರಿ ),ಕು.ಪ್ರಾಪ್ತ ಕಜೆ ( ಆಲಂಕಾರು ಶ್ರೀಮತಿ ಮತ್ತು ಶ್ರೀ ಲತಾಕ್ಷಿ ಜಯಂತ ಕುಮಾರ್ ಪೂಜಾರಿ ಯ ಪುತ್ರಿ ) ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ಉಳಿದಂತೆ ಜಿಲ್ಲಾ ಮಟ್ಟದಲ್ಲಿ ಕು.ಮಾನ್ವಿ ಆರ್ ಪೂಂಜ(ಪೆರಾಬೆ ಪೂಂಜ ಶ್ರೀಮತಿ ಮತ್ತು ಶ್ರೀ ಶ್ರುತಿ ರಾಜೇಂದ್ರ ರ ಪುತ್ರಿ ),ಕು.ಸಾಥ್ವಿ ಆರ್.ರೈ ಸುರುಳಿ (ಪೆರಾಬೆ ಗ್ರಾಮದ ಸುರುಳಿ ಶ್ರಿಮತಿ ಮತ್ತು ಶ್ರೀ ಮಮತ ರಮೇಶ್ ರೈ ರವರ ಪುತ್ರಿ ) ಪುತ್ತೂರು ತಂಡವನ್ನು ಪ್ರತಿನಿಧಿಸಿದ್ದರು.
ಇವರಿಗೆ ಶಾಲಾ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ..ಮುಖ್ಯಮಾತಾಜಿ ಶ್ರೀಮತಿ ಆಶಾ ಎಸ್.ರೈ ರವರ ಮಾರ್ಗದರ್ಶನದೊಂದಿಗೆ,ದೈಹಿಕ ಶಿಕ್ಷಕ ಯೋಗೀಶ್ ಮಾಪಲ ಮತ್ತು ಶಿಕ್ಷಕ ಮತ್ತು ತರಬೇತುದಾರ ಚಂದ್ರಹಾಸ ಕೆ.ಸಿ ಕುಂಟ್ಯಾನ ತರಬೇತಿ ನೀಡಿರುತ್ತಾರೆ.ಪಾಲಕರ ವೃಂದ ಮತ್ತು ಮಾತಾಜಿ ವೃಂದದವರು ಸಹಕರಿಸಿರುತ್ತಾರೆ.




