(ನ್ಯೂಸ್ ಕಡಬ) newskadaba.com ಸೆ. 02. ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ ಎಂದು ನಂಬಿಸಿ 42 ವರ್ಷದ ವ್ಯಕ್ತಿಯೊಬ್ಬರಿಗೆ ಬಾಗಿಲು ಮುಚ್ಚಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.
ತೆರಿಗೆ ಪಾವತಿಸಬೇಕು ಎಂದು ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬರು, ಕಳುಹಿಸಿದ ಗೂಗಲ್ ಪೇ ಹಾಗೂ ಫೋನ್ ಪೇ ಸ್ಕ್ಯಾನರ್‌ಗಳಿಗೆ ಆಗಸ್ಟ್ 15ರಿಂದ 26ರ ಅವಧಿಯಲ್ಲಿ ಹಂತ-ಹಂತವಾಗಿ 3,81,300 ರೂ. ವರ್ಗಾಯಿಸಿಕೊಂಡಿದ್ದಾರೆ.ಲಾಟರಿ ಮೊತ್ತ ಡಬಲ್ ಆಗಿದೆ, ಮತ್ತೊಮ್ಮೆ ತೆರಿಗೆ ಕಟ್ಟಿ ಎಂದು ಕರೆ ಮಾಡಿದಾಗ ಇದು ಮೋಸದ ಜಾಲವೆಂದು ಅರಿತ ಸಂತ್ರಸ್ತರು ಸೈಬರ್ ಹೆಲ್ಪ್‌ಲೈನ್ ಹಾಗೂ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆನ್‌ಲೈನ್ ಲಾಟರಿ ಕರೆಗಳು ಹಾಗೂ ಅಪರಿಚಿತ ಲಿಂಕ್/ಸ್ಕ್ಯಾನರ್‌ಗಳ ಕುರಿತು ಜಾಗರೂಕರಾಗಿರಿ.








