ಎಡಕುಮೇರಿ: ರೈಲು ಢಿಕ್ಕಿ ► ತಾಯಿ ಆನೆ ಹಾಗೂ ಮರಿಯಾನೆ ಸಾವು



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.04. ಆನೆ ಹಾಗೂ ಮರಿ ಆನೆಯೊಂದು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಎಡಕುಮೇರಿ ಸಮೀಪ ಸೋಮವಾರದಂದು ನಡೆದಿದೆ.







ಮಂಗಳೂರು – ಬೆಂಗಳೂರು ರೈಲು ಮಾರ್ಗದ ಹಾಸನದಿಂದ ಸುಮಾರು 72 ಕಿಲೋಮೀಟರ್ ದೂರದಲ್ಲಿ ಎಡಕುಮೇರಿ ಹಾಗೂ ಅರೆ ಘಟ್ಟ ಪ್ರದೇಶದ ನಡುವೆ ರೈಲ್ವೇ ಸೇತುವೆಯಲ್ಲಿ ಭಾನುವಾರ ರಾತ್ರಿ ರೈಲಿಗೆ ಆನೆಗಳು ಅಡ್ಡ ಬಂದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮರಿಯಾನೆ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಆನೆ ಗಂಭೀರ ಗಾಯಗೊಂಡು ಸೋಮವಾರದಂದು ಅಸುನೀಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top