ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ದೀರ್ಘಕಾಲದ LPC ಆರೋಪಿ ವಶಕ್ಕೆ



(ನ್ಯೂಸ್‌ ಕಡಬ) newskadaba.com,  ಜೂ.25: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಜೂನ್ 24ರಂದು ಬಂಧಿಸಿದ್ದಾರೆ.







ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂತಲ್ಪಾಡಿ ನಿವಾಸಿ ಪ್ರಸಾದ್ (33) ಬಂಧಿತ ಆರೋಪಿ.2016ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಕಳವು ಪ್ರಕರಣ (ಅಪರಾಧ ಸಂಖ್ಯೆ: 289/2016) ದಾಖಲಾಗಿತ್ತು. ಆರೋಪಿ ದೀರ್ಘಕಾಲ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದನ್ನು ಎಲ್‌ಪಿಸಿ (LPC) ಪ್ರಕರಣ ಎಂದು ಪರಿಗಣಿಸಿತ್ತು.






ವಿಚಾರಣೆ ವೇಳೆ ಆರೋಪಿ ಪ್ರಸಾದ್ ವಿರುದ್ಧ ಹಿರಿಯಡ್ಕ, ಕೊಣಾಜೆ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲೂ ವಿವಿಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

error: Content is protected !!
Scroll to Top