ನಿಖಿಲ್ ಶೆಟ್ಟಿಗೆ ಬೆಳ್ಳಿ ಪದಕ: ಗಾಮಾ ಏಷ್ಯನ್ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಫೈಟರ್‌ ಸಾಧನೆ



(ನ್ಯೂಸ್‌ ಕಡಬ) newskadaba.com,  ಆ.04:  ಮಂಗಳೂರು: ಮಲೇಷ್ಯಾದಲ್ಲಿ ನಡೆದ ಗಾಮಾ ಏಷ್ಯನ್ ಚಾಂಪಿಯನ್‌ಶಿಪ್–2026ರಲ್ಲಿ ಮಂಗಳೂರಿನ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಫೈಟರ್ ನಿಖಿಲ್ ಶೆಟ್ಟಿ 74.9 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ.







ಏಷ್ಯಾದ ಪ್ರಬಲ ಹವ್ಯಾಸಿ ಸ್ಪರ್ಧಾಳುಗಳನ್ನು ಎದುರಿಸಿ ಫೈನಲ್ ಪ್ರವೇಶಿಸಿದ್ದ ನಿಖಿಲ್, ಕೋಚ್ ಕೌಶಿಕ್ ಬೋಳೂರು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಕಶರ್ಪ್ ಫಿಟ್ನೆಸ್ ಮತ್ತು ದಿ ಡೆನ್’‌ನಲ್ಲಿ ಅಭ್ಯಾಸ ನಡೆಸುತ್ತಿರುವ ಅವರು ಅಲ್ಲಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಕರಾವಳಿಗೆ ಕೀರ್ತಿ ತಂದ ನಿಖಿಲ್ ಶೆಟ್ಟಿ ಅವರ ಸಾಧನೆಗೆ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.






error: Content is protected !!
Scroll to Top