2030 ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಅಧಿಕೃತ ಆತಿಥ್ಯ!

(ನ್ಯೂಸ್‌ ಕಡಬ) newskadaba.com,  ಆ.04:  2030ರ ಶತಮಾನೋತ್ಸವ  ಕಾಮನ್‌ವೆಲ್ತ್ ಕೂಟಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ.   ನೀರಜ್ ಚೋಪ್ರಾ, ಪಿ.ಟಿ. ಉಷಾ ಮತ್ತು ಹರ್ಷ್ ಸಂಘವಿ ಅವರಿಗೆ ಸ್ಕಾಟ್‌ಲ್ಯಾಂಡ್ ಅಧಿಕಾರಿಗಳಿಂದ ಅಧಿಕೃತ ಬ್ಯಾಟನ್ ಹಾಗೂ ಧ್ವಜ ಹಸ್ತಾಂತರ.

ಶಂಕರ್ ಮಹಾದೇವನ್ ಅವರ ದೇಶಭಕ್ತಿ ಗೀತೆಗಳು, ಮನುಷಿ ಚಿಲ್ಲರ್ ನೃತ್ಯ ಪ್ರದರ್ಶನ ಹಾಗೂ ಭಾರತ-ಸ್ಕಾಟ್‌ಲ್ಯಾಂಡ್ ಕಲಾವಿದರ ‘ಜುಗಲ್ಬಂದಿ’ ಪ್ರೇಕ್ಷಕರ ಮನಸೆಳೆಯಿತು.ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಯಶಸ್ವಿ ಅಭಿಯಾನ ಮುಗಿಸಿದೆ.

2010ರ ದೆಹಲಿ ಕೂಟದ ಬಳಿಕ, ಆಸ್ಟ್ರೇಲಿಯಾವನ್ನು ಬಿಟ್ಟರೆ 2ನೇ ಬಾರಿಗೆ ಕಾಮನ್‌ವೆಲ್ತ್ ಆಯೋಜಿಸುತ್ತಿರುವ ಏಕೈಕ ದೇಶವಾಗಿ ಭಾರತ ಇತಿಹಾಸ ನಿರ್ಮಿಸಲಿದೆ!

Scroll to Top