ತುರ್ತು ಪತ್ರಿಕಾಗೋಷ್ಠಿ ಕರೆದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಡಿಕೆಶಿ ► ಕಾರಣವಾದರೂ ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.31. ಕೇಂದ್ರ ಸರಕಾರವು ಸಿಬಿಐ ಹಾಗೂ ಐಟಿ ಅಸ್ತ್ರ ಬಳಸಿ ನಮ್ಮನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದು, ಇದು ಕೇವಲ ಅವರ ಭ್ರಮೆ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ‌.

ಗುರುವಾರ ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಕೇಂದ್ರ ಸರಕಾರವು ವಾಮ ಮಾರ್ಗಗಳ ಮೂಲಕ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ನಡೆಸುತ್ತಿದ್ದು, ಇದು ಸಾಧ್ಯವಿಲ್ಲ. ನನ್ನನ್ನು ಸಿಬಿಐ ಟಾರ್ಗೆಟ್ ಮಾಡಿದ್ದು, ನಮ್ಮನ್ನು ಯಾರಿಂದಲೂ ಎದುರಿಸಲು ಸಾಧ್ಯವಿಲ್ಲ. ನಾವು ಯಾವುದೇ ಬೆದರಿಕೆಗಳಿಗೆ ಜಗ್ಗುವವರಲ್ಲ‌. ತಕ್ಕಡಿಯು ಒಂದೇ ಬದಿಗೆ ವಾಲಿ ನಿಲ್ಲುವುದಿಲ್ಲ. ಬದಲಾಗಿ ಏರುಪೇರಾಗುತ್ತಾ ಇರುವುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಬಿಜೆಪಿಯವರ ಕೊನೆಯ ಕಾಲ ಸಮೀಪಿಸುತ್ತಿದ್ದು, ಇದನ್ನು ಯಾರೂ ಮರೆಯಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

Also Read  ಹೈದರಾಬಾದ್➤ಸ್ವಾತಂತ್ರ್ಯೋತ್ಸವದಂದು “ಬೆಸ್ಟ್ ಕಾನ್ಸ್ಟೇಬಲ್ ಪ್ರಶಸ್ತಿ” ಮರುದಿನ ಲಂಚಕ್ಕಾಗಿ ಕೈಚಾಚಿದ

error: Content is protected !!
Scroll to Top