ಅರ್ಜೆಂಟೀನಾಗೆ ಶಾಕ್: ವಿಶ್ವಕಪ್ ಎತ್ತಿಹಿಡಿದ ಸ್ಪೇನ್!



(ನ್ಯೂಸ್ ಕಡಬ) newskadaba.com ಜು. 20. ರೋಚಕದಿಂದ ಕೂಡಿದ್ದ ಫಿಫಾ ವಿಶ್ವಕಪ್ 2026 ಫೈನಲ್ ಮಹಾಸಮರದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತಂಡ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.







ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ ಪಂದ್ಯವು ಹೆಚ್ಚುವರಿ ಸಮಯಕ್ಕೆ ಜಾರಿತು. ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು.






ದ್ವಿತೀಯಾರ್ಧದ ಇಂಜುರಿ ಟೈಮ್ನಲ್ಲಿ ಸ್ಪೇನ್ ಪಾವು ಕುಬಾರ್ಸಿ ವಿರುದ್ಧ ಅಪಾಯಕಾರಿ ಫೌಲ್ ಮಾಡಿದ ಎಂಜೊ ಫೆರ್ನಾಂಡಿಸ್ ಎರಡನೇ ಹಳದಿ ಕಾರ್ಡ್ ಪಡೆದು ಹೊರನಡೆದರು. ಇದರಿಂದ ಅರ್ಜೆಂಟೀನಾ ಕೊನೆ ಹಂತದಲ್ಲಿ 10 ಆಟಗಾರರೊಂದಿಗೆ ಆಡಬೇಕಾಯಿತು.

ಸ್ಪೇನ್ ಪಂದ್ಯದುದ್ದಕ್ಕೂ 15 ಬಾರಿ ಗೋಲಿಗೆ ಯತ್ನಿಸಿತು. ಅರ್ಜೆಂಟೀನಾದ ಗೋಲ್ ಕೀಪರ್ ಮಾರ್ಟಿನೆಜ್ ಬರೋಬ್ಬರಿ 10 ಗೋಲುಗಳ ಯತ್ನವನ್ನು (ವಿಶೇಷವಾಗಿ ಲ್ಯಾಮೈನ್ ಯಮಾಲ್ ಅವರ ಫ್ರೀಕಿಕ್) ತಡೆದು, ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ತಡೆದ ಗೋಲ್ ಕೀಪರ್ ಎಂಬ ವಿಶ್ವದಾಖಲೆ ಬರೆದರು.

ಗೆಲುವಿನೊಂದಿಗೆ ಸ್ಪೇನ್, ಪುರುಷರ ಮತ್ತು ಮಹಿಳೆಯರ ಫಿಫಾ ವಿಶ್ವಕಪ್ ಎರಡೂ ಟ್ರೋಫಿಗಳನ್ನು ಏಕಕಾಲದಲ್ಲಿ ಹೊಂದಿರುವ ಜಗತ್ತಿನ ಮೊದಲ ದೇಶ ಎಂಬ ಐತಿಹಾಸಿಕ ಸಾಧನೆಗೆ ಪಾತ್ರವಾಯಿತು.

error: Content is protected !!
Scroll to Top