ಜಿಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟಿದ ಶಿಸ್ತಿನ ನಾಯಿಗಳು ಜಾಲತಾಣಗಳಲ್ಲಿ ವೀಡಿಯೊ ಸದ್ದು!

(ನ್ಯೂಸ್ ಕಡಬ) newskadaba.com ಜು. 20. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗುಂಪೊಂದು ಟ್ರಾಫಿಕ್ ನಿಯಮ ಪಾಲಿಸಿ, ಪಾದಚಾರಿಗಳಿಗಾಗಿ ಮೀಸಲಾದ ಜೀಬ್ರಾ ಕ್ರಾಸಿಂಗ್ ಮೂಲಕವೇ ಕ್ರಮಬದ್ಧವಾಗಿ ರಸ್ತೆ ದಾಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ ‘ಎಕ್ಸ್‘ (X) ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

“ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.

ಜನನಿಬಿಡ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಗಮನಿಸಿ, ಶಿಸ್ತಿನಿಂದ ಜೀಬ್ರಾ ಕ್ರಾಸಿಂಗ್‌ ನಲ್ಲೇ ರಸ್ತೆ ದಾಟಿದ ನಾಯಿಗಳ ನಡವಳಿಕೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. “ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಶಿಸ್ತಿನ ಅರಿವು ಹೆಚ್ಚಾಗಿದೆ” ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ಮನುಷ್ಯರೂ ಕೂಡ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

Scroll to Top