ಟೀಂ ಇಂಡಿಯಾದ ಯುವ ವೇಗಿಗೆ ದಂಡ ವಿಧಿಸಿದ ಐಸಿಸಿ



(ನ್ಯೂಸ್ ಕಡಬ) newskadaba.com ಜು. 18. ಎಡ್ಜ್ ಬಾಸ್ಟನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಗೆಲುವಿನಲ್ಲಿ ತಂಡದ ಯುವ ವೇಗಿ ಗುರ್ನೂರ್ ಬ್ರಾರ್ ಪ್ರಮುಖ ಪಾತ್ರ ವಹಿಸಿದ್ದರು.







ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಬ್ರಾರ್, ಇಂಗ್ಲೆಂಡ್ ನ ಇಬ್ಬರು ಆರಂಭಿಕ ಆಟಗಾರರನ್ನು ಒಂದೇ ಓವರ್ ನಲ್ಲಿ ಔಟ್ ಮಾಡುವ ಮೂಲಕ 2 ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು.






ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಂಪೂರ್ಣ ಕುಸಿದು, ಪೂರ್ಣ 50 ಓವರ್ ಗಳನ್ನು ಆಡಲಾಗದೆ ಸೋಲೊಪ್ಪಿಕೊಂಡಿತು.

ಬೌಲಿಂಗ್ ಮಾಡುವ ವೇಳೆ ಕೋಪಗೊಂಡ ಗುರ್ನೂರ್ ಬ್ರಾರ್, ಇಂಗ್ಲೆಂಡ್ನ ಆರಂಭಿಕ ಆಟಗಾರ ಬೆನ್ ಡಕೆಟ್ ಅವರ ಕಡೆಗೆ ವೇಗವಾಗಿ ಚೆಂಡನ್ನು ಎಸೆದಿದ್ದರು. ಚೆಂಡು ತಗುಲುವ ಅಪಾಯದಿಂದ ಡಕೆಟ್ ಸ್ವಲ್ಪದರಲ್ಲೇ ಪಾರಾಗಿದ್ದರು. ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಪಂದ್ಯದ ರೆಫರಿ, ಬ್ರಾರ್ ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಅವರಿಗೆ ದಂಡ ವಿಧಿಸಿದ್ದಾರೆ.

error: Content is protected !!
Scroll to Top