ಸಮುದ್ರದಲ್ಲಿ ದೋಣಿ ಪಲ್ಟಿ: ಓರ್ವ ನಾಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು.12. ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿಬಿದ್ದ ಪರಿಣಾಮ ಓರ್ವ ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ಬೇಕಲ ಪಳ್ಳಿಕೆರೆಯಲ್ಲಿ ನಡೆದಿದೆ.

ಈ ವೇಳೆ ದೋಣಿಯಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರಿದ್ದಾರೆ. ತೃಕ್ಕನಾಡಿನ ಕೊಟ್ಟನ್( 54) ನಾಪತ್ತೆಯಾದವರು. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದುರಂತೆ ಸಂಭವಿಸಿದೆ. ಕೊಟ್ಟನ್ ಸೇರಿದಂತೆ ಐವರು ಬೆಸ್ತರು ಪಳ್ಳಿಕೆರೆ ತೀರದಿಂದ ಮೀನುಗಾರಿಕೆಗೆ ದೋಣಿಯಲ್ಲಿ ತೆರಳಿದ್ದರು. ಅಲ್ಪಮುಂದೆ ಸಾಗುತ್ತಿದ್ದಂತೆ ಕಡಲಿನ ತೆರೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ದೋಣಿಯಲ್ಲಿದ್ದ ಕುಮಾರ್, ರಾಜೇಶ್ ಸೇರಿದಂತೆ ನಾಲ್ವರು ಈಜಿ ದಡ ಸೇರಿದ್ದಾರೆ. ಆದರೆ ಅಲೆಗಳ ಅಬ್ಬರಕ್ಕೆ ಸಿಲುಕಿದ ಕೊಟ್ಟನ್ ಸಮುದ್ರಪಾಲಾದರೆನ್ನಲಾಗಿದೆ.

Also Read  ಮಾರ್ಚ್ 31ರ ವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

ಕೊಟ್ಟನ್ ಅವರಿಗಾಗಿ ಮೀನುಗಾರರು ಬಳಿಕ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬೇಕಲ ಠಾಣಾ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ , ಕರಾವಳಿ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

 

error: Content is protected !!
Scroll to Top