85 ರ ಗಡಿ ದಾಟಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್‌ ಲೀಟರಿಗೆ 73 ರೂ. ► ಮೌನಕ್ಕೆ ಶರಣಾದ ಎನ್‌ಡಿಎ ಮಿತ್ರಪಕ್ಷ, ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.24. ಪೆಟ್ರೋಲಿಯಂ ಉತ್ಪನ್ನಗಳು ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85 ರ ಗಡಿಯನ್ನು ದಾಟಿದೆ.

ಇದು ಭಾರತದಲ್ಲಿ ಇಲ್ಲಿಯವರೆಗೆ ದಾಖಲಾದ ಅತೀ ಗರಿಷ್ಟ ದರವಾಗಿದೆ. ಕಳೆದ ಹತ್ತು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದು, ಹಾಗಾಗಿ ಗರಿಷ್ಟ ದಾಖಲೆಯ ಬೆಲೆಯನ್ನು ಮುಟ್ಟಿದೆ‌. ಹಿಂದೆಂದೂ ಭಾರತದಲ್ಲಿ ಇಷ್ಟೊಂದು ಗರಿಷ್ಟ ದರ ದಾಖಲಾಗಿರಲಿಲ್ಲ. ಇಂದು ಮುಂಬಯಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 85.29 ರೂ. ಹಾಗೂ ಡೀಸೆಲ್‌ ಲೀಟರೊಂದಕ್ಕೆ 72.96 ರೂ. ಗಳಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ 78.73 ರೂ‌.ಹಾಗೂ ಡೀಸೆಲ್‌ 69.71 ರೂ. ಗಳಿಗೇರಿದೆ. ತೈಲ ಬೆಲೆಗಳ ಹಠಾತ್ ಏರಿಕೆಯಿಂದ ಸರಕು ಹಾಗೂ ಪ್ರಯಾಣಿಕರ ಸಾಗಾಟ ವೆಚ್ಚದಲ್ಲೂ ಭಾರೀ ಏರಿಕೆಯಾಗಿದ್ದು, ತರಕಾರಿ, ಹಣ್ಣುಹಂಪಲುಗಳ ಬೆಲೆಗಳು ಕೈ ಸುಟ್ಟುಕೊಳ್ಳುವಂತಿವೆ.

Also Read  ಎಡೆಬಿಡದೆ ಸುರಿಯುತ್ತಿರುವ ಮಳೆ ➤ ಕಾಡಿನಲ್ಲಿಯೇ ಮಗುವಿಗೆ ಜನ್ಮವಿತ್ತ ಮಹಿಳೆ- ರಕ್ಷಣೆ

ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ 65 ರೂ. ದಾಟಿದ ಕೂಡಲೇ ಪ್ರತಿಭಟನೆ ನಡೆಸುತ್ತಿದ್ದ ಎನ್‌ಡಿಎ ಮಿತ್ರಪಕ್ಷಗಳು ತೈಲ ಬೆಲೆಗಳು ದಿನೇ ದಿನೇ ಗಗನಕ್ಕೇರುತ್ತಿದ್ದರೂ ಇದೀಗ ತುಟಿಪಿಟಿಕ್ ಎನ್ನದೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!
Scroll to Top