ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಂದ್: ಜಾಗತಿಕವಾಗಿ ಮೆಟಾ ಸರ್ವರ್ ಡೌನ್!

(ನ್ಯೂಸ್‌ ಕಡಬ) newskadaba.com,  ಜೂ.13 ಬೆಂಗಳೂರು: ಮೆಟಾ ಒಡೆತನದ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಆ್ಯಪ್‌ಗಳು ಜಾಗತಿಕವಾಗಿ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ ಎಂದು ವೆಬ್‌ಸೈಟ್‌ಗಳ ಸ್ಥಿತಿಗತಿ ಟ್ರ್ಯಾಕ್ ಮಾಡುವ ‘ಡೌನ್‌ಡಿಟೆಕ್ಟರ್’ ದೃಢಪಡಿಸಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಲಕ್ಷಾಂತರ ಬಳಕೆದಾರರ ಖಾತೆಗಳು ತಾವಾಗಿಯೇ ಲಾಗ್ ಔಟ್ ಆಗಿದ್ದು, ಮರಳಿ ಲಾಗಿನ್ ಮಾಡಲು ಯತ್ನಿಸಿದಾಗ “ಸೆಷನ್ ಎಕ್ಸ್‌ಪೈರ್ಡ್” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಫೀಡ್ ರಿಫ್ರೆಶ್ ಹಾಗೂ ಪೋಸ್ಟ್ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.

ಇದು ಕೇವಲ ತಾಂತ್ರಿಕ ದೋಷವಾಗಿದ್ದು, ಬಳಕೆದಾರರ ಖಾತೆಗಳು ಹ್ಯಾಕ್ ಆಗಿಲ್ಲ ಎಂದು ಸೈಬರ್ ತಜ್ಞರು ಸ್ಪಷ್ಟಪಡಿಸಿದ್ದಾರೆ.ಜಾಗತಿಕ ದೋಷದ ಬಗ್ಗೆ ಗಮನಹರಿಸಲಾಗಿದ್ದು, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಆದರೆ, ಸರ್ವರ್ ದೋಷಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಲಾಗಿನ್ ಸಮಸ್ಯೆಯಿಂದ ಬೇಸತ್ತ ಬಳಕೆದಾರರು ಎಕ್ಸ್ ನತ್ತ ಮುಖ ಮಾಡಿದ್ದು, ಪ್ರಸ್ತುತ ಜಾಗತಿಕವಾಗಿ #FacebookDown ಮತ್ತು #InstagramDown ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ.

 

 

Scroll to Top