ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ ತಿರುಪತಿ ಮಾದರಿಯಲ್ಲಿ ‘ಶೀಘ್ರ ದರ್ಶನ’ ಪ್ಯಾಕೇಜ್ ಆರಂಭಿಸಿದ KSTDC!



(ನ್ಯೂಸ್ಕಡಬ) newskadaba.com,  ಜೂ.13 : ರಾಜಧಾನಿ ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಹಸ್ರಾರು ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಿಹಿ ಸುದ್ದಿ ನೀಡಿದೆ. ಧರ್ಮಸ್ಥಳದಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು, ತಿರುಪತಿ ಮಾದರಿಯಲ್ಲಿ ಶೀಘ್ರ ದರ್ಶನ’ ಸೌಲಭ್ಯ ಒಳಗೊಂಡ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಇಂದಿನಿಂದ ಜಾರಿಗೆ ತರಲಾಗಿದೆ.







ಧರ್ಮಸ್ಥಳ (ಮಂಜುನಾಥ ಸ್ವಾಮಿ ದೇವಸ್ಥಾನ), ಕುಕ್ಕೆ ಸುಬ್ರಹ್ಮಣ್ಯ ಮತ್ತು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ.2 ದಿನಗಳು ಮತ್ತು 1 ರಾತ್ರಿ ಒಳಗೊಂಡಿರುತ್ತದೆ.ಹವಾ ನಿಯಂತ್ರಿತ ಬಸ್ ವ್ಯವಸ್ಥೆ.ಈ ಪ್ಯಾಕೇಜ್ ಮೂಲಕ ಹೋಗುವ ಭಕ್ತರಿಗೆ ಧರ್ಮಸ್ಥಳದಲ್ಲಿ ಪ್ರತ್ಯೇಕ ಲೈನ್ ಮೂಲಕ ಶೀಘ್ರ ದರ್ಶನಕ್ಕೆ ಅವಕಾಶ ಇರಲಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ. ಒಬ್ಬ ವ್ಯಕ್ತಿಗೆ ₹4,450.






ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ವಾರಕ್ಕೆ ಒಮ್ಮೆ ಮಾತ್ರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದ್ದು, ಭಕ್ತರ ಸ್ಪಂದನೆ ಆಧರಿಸಿ ಮುಂದಿನ ದಿನಗಳಲ್ಲಿ ದಿನಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.

error: Content is protected !!
Scroll to Top