ಖಾಸಗಿ ಆಸ್ಪತ್ರೆಗಳ ಲೂಟಿಗೆ ಬೀಳುತ್ತಾ ಬ್ರೇಕ್? ಆಯುಷ್ಮಾನ್ ಭಾರತ್ ರೋಗಿಗಳಿಗೆ ಇಲ್ಲಿದೆ ಬಿಗ್ ಅಪ್ಡೇಟ್!



(ನ್ಯೂಸ್ಕಡಬ) newskadaba.com, ಜೂ.11 : ಆಯುಷ್ಮಾನ್ ಭಾರತ್ ಫಲಾನುಭವಿಗಳಿಂದ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡಿದರೆ ಆಸ್ಪತ್ರೆ ಮತ್ತು ‘ಆರೋಗ್ಯ ಮಿತ್ರ’ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ.ವಿಶೇಷ ವಾರ್ಡ್ ಆಯ್ಕೆ ಮಾಡುವ ರೋಗಿಗಳಿಗೆ ಯೋಜನೆ ವಿಸ್ತರಣೆ ಚಿಂತನೆ; ರೋಗಿ ಬರೆದ ಹೆಚ್ಚುವರಿ ಶುಲ್ಕ ಮಾತ್ರ ಪಾವತಿಸಬೇಕು.







ವಿಮಾ ಕ್ಲೈಮ್ ಅನುಮೋದನೆ ತಡ ಮಾಡುವ ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸಚಿವರ ಕಡಕ್ ವಾರ್ನಿಂಗ್.ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯವೈಖರಿ ಹಾಗೂ ವೈದ್ಯರ ಸಮಯಪಾಲನೆಗೆ DHO ಕಚೇರಿಯಿಂದಲೇ ಸಿಸಿಟಿವಿ ಮೂಲಕ ನಿಗಾ.






ಆಂಬುಲೆನ್ಸ್, ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರ ಕೊರತೆ ಮತ್ತು ಐಸಿಯು ರೋಗಿಗಳಿಗೆ ಮುಖ-ದೃಢೀಕರಣದ ಸಮಸ್ಯೆಗೆ ಮುಕ್ತಿ.ದುರ್ಗಮ ಪ್ರದೇಶಗಳ ಗುತ್ತಿಗೆ ವೈದ್ಯರ ವೇತನ ಹೆಚ್ಚಳ ಹಾಗೂ 3 ವರ್ಷ ಸೇವೆ ಮುಗಿಸಿದವರನ್ನು ಕಾಯಂ ಮಾಡಲು ಪರಿಶೀಲನೆ.

error: Content is protected !!
Scroll to Top