(ನ್ಯೂಸ್ ಕಡಬ) newskadaba.com, ಜು.10 ಮಂಗಳೂರು: ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜುಲೈ 14 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ (ಮಂಗಳೂರು), ಗೋಲ್ಡನ್ ವಿಂಗ್ಸ್ ಲಿಫ್ಟ್ ಮತ್ತು ಎಲಿವೇಟರ್ಸ್ ಪ್ರೈವೇಟ್ ಲಿಮಿಟೆಡ್ (ಮಂಗಳೂರು) ಹಾಗೂ ಸಂಭವ್ ಪೌಂಡೇಶನ್ (ಬೆಂಗಳೂರು) ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಈ ಸಂದರ್ಶನ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು: ಅಸಿಸ್ಟಂಟ್ ಮ್ಯಾನೇಜರ್, ಹೆಚ್.ಆರ್., ಟೆಲಿಕಾಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಲಿಫ್ಟ್ ಟೆಕ್ನಿಶಿಯನ್, ಇ.ವಿ. ಇಲೆಕ್ಟ್ರಿಶಿಯನ್, ಇಲೆಕ್ಟ್ರಿಶಿಯನ್, ಸಿ.ಎನ್.ಸಿ. ಆಪರೇಟರ್ ಮತ್ತು ಹೆಲ್ಪರ್.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.ಕೆಲಸದ ಸ್ಥಳ ಮಂಗಳೂರು ಮತ್ತು ಬೆಂಗಳೂರು.
ಆಸಕ್ತ ಅಭ್ಯರ್ಥಿಗಳು ತಮ್ಮ ನವೀಕರಿಸಿದ ಬಯೋಡೇಟಾ ಜೊತೆಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









