(ನ್ಯೂಸ್ ಕಡಬ) newskadaba.com ಜೂ. 10. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 4 ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ 2 ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಯು ಖಾಲಿಯಿದ್ದು, ಸದರಿ ಖಾಲಿ ಹುದ್ದೆಗೆ ತಾತ್ಕಲಿಕ ನೇಮಕಾತಿಗಾಗಿ ಕೃಷಿ ಹಾಗೂ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಹುದ್ದೆಯು ಗುತ್ತಿಗೆ ಆಧಾರಿತವಾಗಿದ್ದು ಹಾಗೂ ತಾತ್ಕಾಲಿಕವಾಗಿರುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು 24-06-2026 ಕೊನೆಯ ದಿನವಾಗಿದ್ದು, (ಸಂಜೆ 5.30 ಗಂಟೆ)ರ ಒಳಗಾಗಿ ಸಲ್ಲಿಸಬಹುದಾಗಿದೆ.
ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂ.ಎಸ್ಸಿ ಕೃಷಿ/ಇತರೆ ಕೃಷಿ ಸ್ನಾತಕೋತ್ತರ ಪದವಿ/ಪದವಿಯನ್ನು ಸರ್ಕಾರಿ ನೋಂದಾಯಿತ ವಿಶ್ವವಿದ್ಯಾಲಯದ ಅಡಿಯಲ್ಲಿ ಪಡೆದಿರಬೇಕು. ಹಾಗೂ ಕೃಷಿ ವಿಸ್ತರಣೆಯಲ್ಲಿ 2 ವರ್ಷಗಳ ಅನುಭವ ಕಡ್ಡಾಯವಾಗಿರುತ್ತದೆ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಬಿ.ಎಸ್ಸಿ ಕೃಷಿ/ಎಂ.ಎಸ್ಸಿ ಕೃಷಿ/ಇತರೆ ಕೃಷಿ ಸ್ನಾತಕೋತ್ತರ ಪದವಿ/ಪದವಿಯನ್ನು ಸರ್ಕಾರಿ ನೋಂದಾಯಿತ ವಿಶ್ವವಿದ್ಯಾಲಯದ ಅಡಿಯಲ್ಲಿ ಪಡೆದಿರಬೇಕು. ಹಾಗೂ ಕೃಷಿ ವಿಸ್ತರಣೆಯಲ್ಲಿ ಒಂದು ವರ್ಷದ ಅನುಭವ ಕಡ್ಡಾಯವಾಗಿರುತ್ತದೆ.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ದೂರವಾಣಿ ಸಂಖ್ಯೆ: 0824-2423604 ಅಥವಾ ಇಮೇಲ್ ಐಡಿ jdagrimng@gmail.com ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













